ಇನ್ಮುಂದೆ ಆಟೋ ಚಾಲಕರಿಗೆ QR ಕೋಟಡ್‌ ಕಡ್ಡಾಯ!

masthmagaa.com:

ಬೆಂಗಳೂರು ಮಹಾನಗರದ ಸಂಚಾರ ಪೊಲೀಸರು ಆಟೋಗಳಲ್ಲಿ ನಡೆಯುವ ಸುಲಿಗೆಯನ್ನ ತಡೆಯಲು ಹೊಸ ಕ್ರಮಕ್ಕೆ ಮುಂದಾಗಿದ್ದಾರೆ. ಇನ್ಮೇಲಿಂದ ಆಟೋಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗುತ್ತಿದೆ. ಈಗಾಗಲೇ ಆಟೋಗಳಲ್ಲಿ ಡಿಸ್​ಪ್ಲೇ ಕಾರ್ಡ್ ಅಂದ್ರೆ ಚಾಲಕರ ಹಿಂಭಾಗದಲ್ಲಿ ಅವರ ಡಿಟೇಲ್ಸ್‌ ಇರೋ ಕಾರ್ಡ್‌ ಕಡ್ಡಾಯ ಮಾಡಲಾಗಿದೆ. ಇದೀಗ ಇದರ ಬದಲು QR ಕೋಡ್‌ನ್ನ ಅಳವಡಿಸಲಾಗುತ್ತೆ. ಆಟೋಗಳ ನೋಂದಣಿ ಸಂಖ್ಯೆ, ಚಾಲಕನ ಹೆಸರು, ಡ್ರೈವಿಂಗ್‌ ಲೈಸೆನ್ಸ್ ಸೇರಿದಂತೆ ಇನ್ನಿತರ ಮಾಹಿತಿಯನ್ನ ಕ್ಯೂಆರ್ ಕೋಡ್​ನಲ್ಲಿ ಅಳವಡಿಸಲು ಪೊಲೀಸರು ನಿರ್ಧರಿಸಿದ್ದಾರೆ ಅಂತ ಹೇಳಲಾಗಿದೆ. ಇನ್ನು ಹೆಚ್ಚಿನ ಹಣ ಸುಲಿಗೆಯಂತಹ ಘಟನೆ ವಿರುದ್ಧ ಪೊಲೀಸರಿಗೆ ಈ ಕ್ಯೂಆರ್ ಕೋಡ್ ಮೂಲಕ ಸುಲಭವಾಗಿ ದೂರು ಸಲ್ಲಿಸಬಹುದಾಗಿದೆ.

-masthmagaa.com

Contact Us for Advertisement

Leave a Reply