ಕಾಶ್ಮೀರದ ಬಗ್ಗೆ ಪರ್ವೇಜ್ ಮುಶ್ರಫ್ ಹೇಳಿದ್ದೇನು..?

ಜೈಲಿಗೆಲ್ಲಾ ಹೋದ್ಮೇಲೆ ಸ್ವಲ್ಪ ತಣ್ಣಗಾಗಿದ್ದ ಪಾಕಿಸ್ತಾನ ಮಾಜಿ ಮಿಲಿಟರಿ ಸರ್ವಾಧಿಕಾರಿ ಪರ್ವೇಜ್ ಮುಶ್ರಫ್ ಈಗ ಮತ್ತೆ ಕಾಶ್ಮೀರದ ಬಗ್ಗೆ ಮಾತನಾಡಿದ್ದಾರೆ. ಸದ್ಯ ದುಬೈನಲ್ಲಿ ನೆಲೆಸಿರುವ ಅವರು, ಪಾಕಿಸ್ತಾನದ ರಕ್ತದಲ್ಲೇ ಕಾಶ್ಮೀರ ಇದೆ. ನಾವು ಯಾವತ್ತಿಗೂ ಕಾಶ್ಮೀರ ಪರವಾಗಿಯೇ ನಿಲ್ಲುತ್ತೇವೆ. ಪಾಕಿಸ್ತಾನದ ಶಾಂತಿಯ ತತ್ವವನ್ನು ದೌರ್ಬಲ್ಯ ಎಂದು ತಿಳಿಯಬಾರದು ಎಂದಿದ್ದಾರೆ.

ಆಲ್ ಪಾಕಿಸ್ತಾನ್ ಮುಸ್ಲಿಂ ಲೀಗ್ ಅಧ್ಯಕ್ಷರಾಗಿರುವ 76 ವರ್ಷದ ಪರ್ವೇಜ್ ಮುಶ್ರಫ್ ಈಗ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಮತ್ತೆ ರಾಜಕೀಯಕ್ಕೆ ವಾಪಸ್ ಆಗಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ. ಭಾನುವಾರ ಇಸ್ಲಾಮಾಬಾದ್‍ನಲ್ಲಿ ಆಲ್ ಪಾಕಿಸ್ತಾನ್ ಮುಸ್ಲಿಂ ಲೀಗ್ ಪಕ್ಷದ ವಾರ್ಷಿಕೋತ್ಸವ ಆಚರಿಸಲಾಯ್ತು. ಈ ವೇಳೆ ದುಬೈನಿಂದಲೇ ಫೋನ್ ಮೂಲಕ ಮುಶ್ರಫ್ ಮಾತನಾಡಿದ್ದರು.

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮುಶ್ರಫ್ ಕಳೆದ ಒಂದು ವರ್ಷದಿಂದ ರಾಜಕೀಯದಿಂದ ದೂರ ಉಳಿದು, ವಿಶ್ರಾಂತಿಯಲ್ಲಿದ್ದರು. ಇನ್ನು ಜಮ್ಮು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ ವಾಪಸ್ ಪಡೆದ ಬಳಿಕ ಮುಶ್ರಫ್ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ.

Contact Us for Advertisement

Leave a Reply