ದುಬೈನಲ್ಲಿ ತಲೆಯೆತ್ತಲಿದೆ ವಿಶ್ವದ ಅತಿ ಎತ್ತರದ ವಸತಿ ಕಟ್ಟಡ!

masthmagaa.com:

ಈಗಾಗಲೇ ಜಗತ್ತಿನ ಅತಿ ಎತ್ತರದ ಕಟ್ಟಡ ಬುರ್ಜ್‌ ಖಲಿಫಾವನ್ನ ಹೊಂದಿರೋ ದುಬೈ ಮತ್ತೊಂದು ವಿಶ್ವದ ಅತಿ ಎತ್ತರದ ವಸತಿ ಕಟ್ಟಡ ನಿರ್ಮಾಣ ಮಾಡೋಕೆ ಮುಂದಾಗಿದೆ. ʻಹೈಪರ್‌ ಟವರ್‌ʼ ಅಥ್ವಾ ಬುರ್ಜ್ ಬಿಂಗಟ್ಟಿ ಜಾಕೋಬ್ ಮತ್ತು ಕೊ ರೆಸಿಡೆನ್ಸ್‌ ಹೆಸರಿನ ಈ ಕಟ್ಟಡ 100 ಅಂತಸ್ತುಗಳನ್ನ ಹೊಂದಿರಲಿದೆ. ಪ್ರಸ್ತುತ ಅತೀ ಎತ್ತರದ ವಸತಿ ಅಂದ್ರೆ ಜನ ವಾಸಿಸೋ ಕಟ್ಟಡ ನ್ಯೂಯಾರ್ಕ್‌ನ ಸೆಂಟ್ರಲ್‌ ಪಾರ್ಕ್‌ ಟವರ್‌ಗಿಂತ ಎರಡು ಅಂತಸ್ತುಗಳು ಈ ಕಟ್ಟಡದಲ್ಲಿ ಹೆಚ್ಚು ಇರಲಿವೆ. 98 ಅಂತಸ್ತುಗಳನ್ನ ಹೊಂದಿರೊ ಸೆಂಟ್ರಲ್‌ ಪಾರ್ಕ್‌ನ ಎತ್ತರ 472 ಮೀ ಇದ್ದು, ಈ ನೂತನ ಕಟ್ಟಡ ಇದಕ್ಕಿಂತ ಎತ್ತರ ಇರಲಿದೆ. ಈ ನೂತನ ಕಟ್ಟಡದ ವಿನ್ಯಾಸವನ್ನ ಅನಾವರಣಗೊಳಿಸಿದ್ದು, ಕಟ್ಟಡದ ತುದಿ ವಜ್ರದ ಆಕಾರ ಇರಲಿದೆ ಅಂತ ಕಟ್ಟಡ ನಿರ್ಮಾಣ ಕಂಪನಿಗಳು ತಿಳಿಸಿವೆ. ಹಾಗೂ ಕಟ್ಟಡದ ನಿವಾಸಿಗಳಿಗೆ ಬಾಡಿಗಾರ್ಡ್, ಪ್ರೈವೇಟ್‌ ಶೆಫ್‌, ಮತ್ತು ಪ್ರೈವೇಟ್‌ ಕ್ಲಬ್‌ ಸೇರಿದಂತೆ ಹಲವು ವಿಶೇಷತೆಗಳು ಇರಲಿವೆ.

-masthmagaa.com

Contact Us for Advertisement

Leave a Reply