masthmagaa.com:

ಜಗತ್ತಿನ ಅತಿ ಉದ್ದದ ಹೆದ್ದಾರಿ ಸುರಂಗವಾದ ‘ಅಟಲ್ ಟನಲ್’ ಅನ್ನು ಪ್ರಧಾನಿ ಮೋದಿ ಅಕ್ಟೋಬರ್ 3ರಂದು ಲೋಕಾರ್ಪಣೆ ಮಾಡಿದ್ದರು. ಆದ್ರೀಗ ಈ ಸುರಂಗದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಾಮಫಲಕವನ್ನು ತೆಗೆದು ಹಾಕಿರೋದು ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಹಿಮಾಚಲ ಪ್ರದೇಶ ಕಾಂಗ್ರೆಸ್​ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಪ್ರತಿಭಟನೆಯ ಎಚ್ಚರಿಕೆ ನೀಡಿದೆ.

ಅಂದ್ಹಾಗೆ ಈ ಸುರಂಗ ಮಾರ್ಗಕ್ಕೆ 2010ರಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅಡಿಗಲ್ಲು ಹಾಕಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾದ ನಾಯಕರ ಹೆಸರಿನ ಫಲಕ ಹಾಕಲಾಗಿತ್ತು. ಆದ್ರೆ ಪ್ರಧಾನಿ ಮೋದಿ ಈ ಸುರಂಗ ಮಾರ್ಗವನ್ನು ಉದ್ಘಾಟಿಸುವ ಮುನ್ನವೇ ಸೋನಿಯಾ ಗಾಂಧಿ ಅವರ ಹೆಸರಿದ್ದ ನಾಮಫಲಕವನ್ನ ಕಿತ್ತು ಹಾಕಲಾಗಿದೆ ಅಂತ ಕಾಂಗ್ರೆಸ್ ಆರೋಪಿಸಿದೆ.

ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಸುವರ್ಣ ಚತುಷ್ಪತ ರಸ್ತೆ ಯೋಜನೆ ಜಾರಿಗೆ ತಂದಿದ್ದರು. ಆದ್ರೆ ನಂತರ ಬಂದ ಯುಪಿಎ ಸರ್ಕಾರದ ಅವಧಿಯಲ್ಲಿ ವಾಜಪೇಯಿಯವರ ಫೊಟೋ ಮತ್ತು ನಾಮಫಲಕವನ್ನ ಕಿತ್ತುಹಾಕಲಾಗಿತ್ತು. ಆಗ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು, ಈಗ ಕಾಂಗ್ರೆಸ್ ಅದೇ ರೀತಿ ಮಾಡ್ತಿದೆ.

-masthmagaa.com

Contact Us for Advertisement

Leave a Reply