ನಾಯಿ ಹೆಸರಿಗೆ ತನ್ನೆಲ್ಲಾ ಆಸ್ತಿ ಬರೆಯೋದಾಗಿ ಘೋಷಿಸಿದ ಮಾಡಲ್!

masthmagaa.com:

ಸಾಕುಪ್ರಾಣಿಗಳ ಪೈಕಿ ಜನರಿಗೆ ಇಷ್ಟವಾಗೋದು ನಾಯಿ.. ಕೆಲವರಂತೂ ನಾಯಿಯನ್ನು ತಮ್ಮ ಕುಟುಂಬದ ಸದಸ್ಯರಂತೆಯೇ ನೋಡ್ತಾರೆ. ಅದಕ್ಕೆ ಈ ಮಾಡಲ್ ಸಾಕ್ಷಿ.. ಬ್ರೆಜಿಲ್​ನ ಜು ಐಸೆನ್ ಅನ್ನೋ ಮಾಡಲ್ ತಮ್ಮ ನಾಯಿಯನ್ನೇ ಆಸ್ತಿಯ ಉತ್ತರಾಧಿಕಾರಿಯನ್ನಾಗಿ ಘೋಷಿಸಿದ್ದಾರೆ. ಇವರ ಬಳಿ ಸುಮಾರು 2 ಮಿಲಿಯನ್ ಡಾಲರ್ ಅಂದ್ರೆ 15 ಕೋಟಿ ರೂಪಾಯಿ ಆಸ್ತಿ ಇದೆ. ಇದೀಗ ತಮ್ಮೆಲ್ಲಾ ಆಸ್ತಿಯನ್ನು ನಾಯಿ ಫ್ರಾನ್ಸಿಸ್ಕೋ ಹೆಸರಿಗೆ ಬರೆಯಲು ವಕೀಲರ ಸಲಹೆ ಪಡೆಯುತ್ತಿದ್ದಾರೆ. ಅಂದಹಾಗೆ ಈವರೆಗೆ ಈ ನಾಯಿ, ಫ್ರಾನ್ಸಿಸ್ಕೋ ಜು ಐಸೆನ್ ಜೊತೆ ಪ್ರೈವೇಟ್ ಜೆಟ್​​ನಲ್ಲಿ ಓಡಾಡಿ, ಸ್ಟೈಲಿಶ್ ಬಟ್ಟೆಯಲ್ಲೇ ಹೊರಗೆ ಬಂದು ಸುದ್ದಿಯಾಗಿತ್ತು. ಕಳೆದ ಜನವರಿಯಲ್ಲಿ ಜು ಐಸೆನ್ ಹೊಸ ರೂಪ ಪಡೆಯಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ರು. ಈವರೆಗೆ ಒಟ್ಟು 50 ಬಾರಿ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದಾರೆ ಈ ಜು ಐಸೆನ್.

-masthmagaa.com

Contact Us for Advertisement

Leave a Reply