ಕಾಣೆಯಾದ ಪ್ರಾಚೀನ ವಸ್ತುಗಳನ್ನ ಹುಡುಕಿಕೊಡಿ! ಸಾರ್ವಜನಿಕರ ಮನವಿ ಮಾಡಿದ ಬ್ರಿಟಿಷ್‌ ಮ್ಯೂಸಿಯಂ!

masthmagaa.com:

ವಿಶ್ವದೆಲ್ಲಡೆಯಿಂದ ಕಲಾಕೃತಿಗಳನ್ನ ಕದ್ದೊಯ್ದು ಮ್ಯೂಸಿಯಂ ಮಾಡ್ಕೊಂಡಿರೋ ಬ್ರಿಟನ್ನೀಗ, ಕಲಾಕೃತಿಗಳು ಕಾಣೆಯಾಗಿವೆ ಹುಡುಕಿಕೊಡಿ ಅಂತ ಜನರಿಗೆ ಮನವಿ ಮಾಡಿದೆ. ಲಂಡನ್‌ನ ಬ್ರಿಟಿಷ್‌ ಮ್ಯೂಸಿಯಂನಿಂದ ಸುಮಾರು 2 ಸಾವಿರ ಪ್ರಾಚೀನ ಕಲಾಕೃತಿಗಳು ಕಾಣೆಯಾಗಿದ್ದು, ಅವುಗಳು ಕುರಿತು ಯಾವುದೇ ಮಾಹಿತಿಯಿದ್ದರೆ ಹಂಚಿಕೊಳ್ಳುವಂತೆ ಮ್ಯೂಸಿಯಂನ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಅಂದ್ಹಾಗೆ ಇತ್ತೀಚೆಗೆ ಮ್ಯೂಸಿಯಂನ ಹಲವು ವಸ್ತುಗಳ ಕಳ್ಳತನ, ಮಿಸ್ಸಿಂಗ್‌ ಅಥ್ವಾ ಡ್ಯಾಮೇಜ್‌ನ ಆರೋಪದ ಮೇಲೆ ಅಲ್ಲಿನ ಸಿಬ್ಬಂದಿಯನ್ನ ಕೆಸಲದಿಂದ ತೆಗೆದು ಹಾಕಿದೆ. ಇದೀಗ ಈ ವಸ್ತುಗಳಾಗಲೀ ಅಥ್ವಾ ಅದರ ಕುರಿತ ಮಾಹಿತಿಯಾಗಲೀ ಇದ್ದರೆ ನಮ್ಮನ್ನ ಸಂಪರ್ಕಿಸಿ ಅಂತ ಮ್ಯೂಸಿಯಂ ರಿಕ್ವೆಸ್ಟ್‌ ಮಾಡಿದೆ.

-masthmagaa.com

Contact Us for Advertisement

Leave a Reply