masthmagaa.com:

ದೇಶದ ಪ್ರಧಾನಿ ಸೇರಿದಂತೆ ರಾಜಕಾರಣಿಗಳು ಯಾವಾಗ ಲಸಿಕೆ ಹಾಕಿಸಿಕೊಳ್ಳಬೇಕು ಅನ್ನೋ ಬಗ್ಗೆ ಸಾಕಷ್ಟು ಚರ್ಚೆ ನಡೀತಿದೆ. ಇದೀಗ, ಪ್ರಧಾನಿ ಮೋದಿ ಎರಡನೇ ಹಂತದಲ್ಲಿ ಕೊರೋನಾ ಲಸಿಕೆ ಹಾಕಿಸಿಕೊಳ್ತಾರೆ ಅಂತ ಮೂಲಗಳು ಹೇಳಿವೆ. ಪ್ರಧಾನಿ ಜೊತೆಗೆ ಹಲವು ರಾಜ್ಯದ ಮುಖ್ಯಮಂತ್ರಿಗಳು ಸಹ ಲಸಿಕೆ ಚುಚ್ಚಿಸಿಕೊಳ್ಳಲಿದ್ದಾರೆ. ಅಂದ್ಹಾಗೆ ಈಗ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಫ್ರಂಟ್​ಲೈನ್​ ವರ್ಕರ್ಸ್​, ಕೊರೋನಾ ವಾರಿಯರ್ಸ್​ಗೆ ಲಸಿಕೆ ಹಾಕಲಾಗ್ತಿದೆ. ಎರಡನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಸೋ ಪ್ರಧಾನಿ ಮೋದಿ ಸೇರಿದಂತೆ ಕೆಲ ರಾಜ್ಯದ ಮುಖ್ಯಮಂತ್ರಿಗಳಿಗೆ 50 ವರ್ಷ ದಾಟಿರೋದ್ರಿಂದ ಅವರಿಗೆ ಈ ಎರಡನೇ ಹಂತದಲ್ಲಿ ಲಸಿಕೆ ಚುಚ್ಚಲಾಗುತ್ತೆ. ಆದ್ರೆ ಎಕ್ಸಾಟ್​ ಡೇಟ್​ ಅನೌನ್ಸ್ ಆಗಿಲ್ಲ. ಅಲ್ಲದೆ 50 ವರ್ಷ ಮೇಲ್ಪಟ್ಟ ಎಲ್ಲಾ ರಾಜಕಾರಣಿಗಳು ಮುಂದೆ ಬಂದು ಲಸಿಕೆ ಹಾಕಿಸಿಕೊಳ್ತಾರಾ ಅನ್ನೋ ಪ್ರಶ್ನೆ ಕೂಡ ಇದೆ.

ಅಂದ್ಹಾಗೆ ಕೊರೋನಾ ಲಸಿಕೆ ಅಭಿಯಾನ ಬಗ್ಗೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸಿಎಂಗಳ ಜೊತೆ ಪ್ರಧಾನಿ ಮೋದಿ ಇತ್ತೀಚೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುವಾಗ, ಯಾವ ರಾಜಕಾರಣಿ ಕೂಡ ಲೈನ್ ಜಂಪ್ ಮಾಡಿ ಲಸಿಕೆ ಹಾಕಿಸಿಕೊಳ್ಳಬಾರದು. ತಮ್ಮ ಸರದಿ ಬಂದಾಗಲೇ ಲಸಿಕೆ ಪಡೀಬೇಕು ಅಂತ ಹೇಳಿದ್ದರು. ಆದ್ರೆ ದೇಶದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಕೆಲ ಆರೋಗ್ಯ ಕಾರ್ಯಕರ್ತರು ಕೂಡ ಹಿಂದೇಟು ಹಾಕ್ತಿದ್ದಾರೆ. ಇದರ ಪರಿಣಾಮ ಕೇಂದ್ರ ಸರ್ಕಾರ ಇಂತಿಷ್ಟು ಸಮಯದಲ್ಲಿ ಇಂತಿಷ್ಟು ಜನಕ್ಕೆ ಲಸಿಕೆ ಹಾಕಬೇಕು ಅಂತ ಹಾಕ್ಕೊಂಡಿದ್ದ ಟಾರ್ಗೆಟ್ ರೀಚ್ ಆಗೋಕೆ ಆಗ್ತಿಲ್ಲ. ಹೀಗಾಗಿ ರಾಜಕಾರಣಿಗಳು ಮೊದಲು ಲಸಿಕೆ ಹಾಕಿಸಿಕೊಳ್ಳಬೇಕು, ಈ ಮೂಲಕ ಲಸಿಕೆ ಬಗ್ಗೆ ಜನರ ಭಯ ಹೋಗಲಾಡಿಸಬೇಕು ಅನ್ನೋ ಕೂಗು ಕೇಳಿ ಬಂದಿತ್ತು, ಬರ್ತಾ ಇದೆ.

-masthmagaa.com

Contact Us for Advertisement

Leave a Reply