ತಿಂಗಳಾಂತ್ಯದಲ್ಲಿ ಸೌದಿಗೆ ನಮೋ..! ಯಾಕೆ ಗೊತ್ತಾ..?

ದೇಶದ ಹಲವೆಡೆ ಪ್ರವಾಹ ಆವರಿಸಿದೆ. ಆದ್ರೂ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗುತ್ತಿಲ್ಲ. ಪ್ರಧಾನಿ ಮೋದಿ ದೇಶ ಸುತ್ಕೊಂಡೇ ಓಡಾಡ್ತಿದ್ದಾರೆ ಅನ್ನೋ ಆರೋಪಗಳು ಕೇಳಿ ಬರುತ್ತಲೇ ಇವೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರು ಇದೇ ತಿಂಗಳ ಅಂತ್ಯದಲ್ಲಿ ಸೌದಿ ಪ್ರವಾಸ ಕೈಗೊಳ್ಳಲಿದ್ದಾರೆ. ರಿಯಾದ್‍ನಲ್ಲಿ ಮಹತ್ವದ ದ್ವಿಪಕ್ಷೀಯ ಮತ್ತು ಹೂಡಿಕೆ ಸಂಬಂಧದ ಸಭೆಯಲ್ಲಿ ಭಾಗಿಯಾಗಲಿದ್ದಾರೆ. 29ರಿಂದ 31ರವರೆಗೆ ಸೌದಿ ಅರೇಬಿಯಾದ ಸಿಗ್ನೇಚರ್ ಫ್ಯೂಚರ್ ಇನ್ವೆಸ್ಟ್ ಮೆಂಟ್ ಶೃಂಗಸಭೆ ನಡೆಯಲಿದೆ. ಇದರಲಿ ಭಾಗಿಯಾಗಲಿರುವ ಪ್ರಧಾನಿ ಮೋದಿ ಸೌದಿ ರಾಜಕುಮಾರ ಮೊಹ್ಮದ್ ಬಿನ್ ತುಘಲಕ್ ಅವರೊಂದಿಗೂ ಭದ್ರತೆ ಮತ್ತು ಆರ್ಥಿಕತೆಯ ವಿಚಾರವಾಗಿ ಮಾತುಕತೆ ನಡೆಸಲಿದ್ದಾರೆ. ಜಮ್ಮು ಕಾಶ್ಮೀರದ ವಿಶೇಷ ಸವಲತ್ತು ರದ್ದುಗೊಳಿಸಿರೋದರಿಂದ ಈ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಇತ್ತೀಚೆಗಷ್ಟೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಕೂಡ ಸೌದಿ ರಾಜಕುಮಾರ ಮೊಹ್ಮದ್ ಬಿನ್ ಸಲ್ಮಾನ್ ಅವರನ್ನು ಭೇಟಿಯಾಗಿದ್ದರು. ಅದರ ಬೆನ್ನಲ್ಲೇ ಜಮ್ಮು ಕಾಶ್ಮೀರ ವಿಚಾರದಲ್ಲಿ ಸಲ್ಮಾನ್ ಭಾರತದ ಪರ ಬ್ಯಾಟ್ ಬೀಸಿದ್ದರು.

Contact Us for Advertisement

Leave a Reply