ಪ್ರಧಾನಿ ಗತಿಶಕ್ತಿ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ!

masthmagaa.com:

ಪ್ರಧಾನ ಮಂತ್ರಿ ಗತಿಶಕ್ತಿ ಯೋಜನೆ ಅಡಿಯಲ್ಲಿ 100 ಲಕ್ಷ ಕೋಟಿ ರೂಪಾಯಿ ಮೊತ್ತದ ಮಾಸ್ಟರ್ ಪ್ಲಾನ್ ರೆಡಿಯಾಗಿದೆ. ಅದಕ್ಕೆ ಇವತ್ತು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಬಹು ವಿಧದ ಸಾರಿಗೆ ಮೂಲಕ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸೋದು.. ಸಾರಿಗೆ ವೆಚ್ಚವನ್ನು ಕಡಿಮೆ ಮಾಡಿ, ಆರ್ಥಿಕತೆಗೆ ಪ್ರೋತ್ಸಾಹ ನೀಡೋದು ಇದ್ರ ಉದ್ದೇಶವಾಗಿದೆ. ಇದು ರೈಲ್ವೆ, ರಸ್ತೆ ಮತ್ತು ಸಾರಿಗೆ, ಹಡಗು, ಮಾಹಿತಿ ಮತ್ತು ತಂತ್ರಜ್ಞಾನ, ಜವಳಿ, ಪೆಟ್ರೋಲಿಯಂ, ಇಂಧನ, ವಿಮಾನಯಾನ ಸೇರಿದಂತೆ 16 ಸಚಿವಾಲಯಗಳನ್ನು ಒಳಗೊಂಡ ಒಂದು ಡಿಜಿಟಲ್ ವೇದಿಕೆಯಾಗಿದೆ. ಈ ಇಲಾಖೆಗಳಲ್ಲಿ ನಡೆಯುತ್ತಿರೋ ಪ್ರಾಜೆಕ್ಟ್​ಗಳು, 2024-25ರೊಳಗೆ ಪೂರ್ಣಗೊಳ್ಳಬೇಕಿರೋ ಪ್ರಾಜೆಕ್ಟ್​ಗಳನ್ನು ಇವುಗಳ ಅಡಿಯಲ್ಲಿ ತರಲಾಗುತ್ತೆ. ಇದ್ರಿಂದ ಯೋಜನೆಗಳಿಗೆ ವೇಗ ಬರುತ್ತೆ ಅನ್ನೋದು ಲೆಕ್ಕಾಚಾರ.. ಈ ಮೂಲಕ 21ನೇ ಶತಮಾನದಲ್ಲಿ ಭಾರತ ಸರ್ಕಾರಿ ವ್ಯವಸ್ಥೆಯ ಹಳೆಯ ಚಿಂತನೆಯನ್ನು ಬಿಟ್ಟು ಮುಂದೆ ಸಾಗುತ್ತಿದೆ ಅಂತ ಪ್ರಧಾನಿ ಮೋದಿ ಹೇಳಿದ್ರು.

-masthmagaa.com

Contact Us for Advertisement

Leave a Reply