ಗುಜರಾತ್‌ನಲ್ಲಿ ಇನ್ವೆಸ್ಟ್‌ ಮಾಡದಂತೆ ವಿದೇಶಿ ಹೂಡಿಕೆದಾರರಿಗೆ ಬೆದರಿಕೆ: ಮೋದಿ

masthmagaa.com:

ಗುಜರಾತ್‌ನಲ್ಲಿ ಹೂಡಿಕೆ ಮಾಡದಂತೆ ವಿದೇಶಿ ಹೂಡಿಕೆದಾರರಿಗೆ ಬೆದರಿಕೆ ಹಾಕಲಾಗಿತ್ತು ಅಂತ ಪ್ರಧಾನಿ ಮೋದಿ ಹಿಂದಿನ ಯುಪಿಎ ಸರ್ಕಾರದ ವಿರುದ್ದ ಆರೋಪಿಸಿದ್ದಾರೆ. ಗುಜರಾತ್‌ನಲ್ಲಿ ನಡೆದ ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ತಾವು ಮುಖ್ಯಮಂತ್ರಿಯಾಗಿದ್ದಾಗ ಈ ರೀತಿಯ ಶೃಂಗಸಭೆಯಲ್ಲಿ ಭಾಗವಹಿಸಲು ಅಂದಿನ ಕೇಂದ್ರ ಸಚಿವರು ನಿರಾಕರಿಸಿದ್ದರು. ಗುಜರಾತ್‌ನಲ್ಲಿ ಬಂಡವಾಳ ಹೂಡಿಕೆ ಮಾಡಬಾರದು ಅಂತ ವಿದೇಶಿ ಹೂಡಿಕೆದಾರರಿಗೆ ಬೆದರಿಕೆ ಹಾಕಲಾಗಿತ್ತು. ಇನ್ವೆಸ್ಟರ್ಸ್‌ ಹೂಡಿಕೆ ಮಾಡಲು ಮುಂದಾದ್ರೂ ಅವರಿಗೆ ಯಾವುದೇ ಬೆಂಬಲ ಸಿಗ್ತಿರಲಿಲ್ಲ ಅಂತ ಮೋದಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply