ಕ್ಸಿ ಜಿನ್‍ಪಿಂಗ್ ಗೆ ಮೋದಿ ಭರ್ಜರಿ ಬಾಡೂಟ..! ಏನೇನ್ ಇತ್ತು ಗೊತ್ತಾ..?

ಭಾರತ ಪ್ರವಾಸದಲ್ಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರಿಗೆ ಪ್ರಧಾನಿ ಮೋದಿ ಮಹಾಬಲಿಪುರಂನಲ್ಲಿ ವಿಶೇಷ ಭೋಜನಕೂಟ ಏರ್ಪಡಿಸಿದ್ದಾರೆ. ಉಭಯ ನಾಯಕರು ಸುಧೀರ್ಘ ಸಮಯದ ಬಳಿಕ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದಾರೆ. ನಿನ್ನೆ ಮಹಾಬಲಿಪುರಂಲ್ಲಿ ದೇಗುಲಗಳ ದರ್ಶನ ಬಳಿಕ ಇಬ್ಬರೂ ನಾಯಕರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದ್ರು. ಬಳಿಕ ಖಾಸಗಿ ಹೊಟೆಲ್ ಗೆ ತೆರಳಿದ ಉಭಯ ನಾಯಕರು ಭರ್ಜರಿ ಭೋಜನ ಸವಿದರು. ಕ್ಸಿ ಜಿನ್ ಪಿಂಗ್ ಗಾಗಿ ಪ್ರಧಾನಿ ಮೋದಿ ವಿಶೇಷವಾಗಿ ಆರ್ಡರ್ ಮಾಡಿ ದೇಸೀ ಖಾದ್ಯಗಳನ್ನು ಮಾಡಿಸಿದ್ದರು.

ಟೊಮೊಟೋ ರಸಂ, ಮಲಬಾರ್ ಲಾಬ್ ಸ್ಟರ್, ಚಿಕನ್ ಖಾದ್ಯ ಕೊರಿ ಕೆಂಪು, ಕರಿಬೇವು ಮೀನು ಕರಿ, ಮಟನ್ ಉಲರ್ ಥಿಯಾಡು, ತಂಜಾವೂರ್ ಕೋಳಿ ಕರಿ ಸೇರಿದಂತೆ ಬಗೆಬಗೆಯ ಖಾದ್ಯಗಳನ್ನು ತಯಾರಿಸಲಾಗಿತ್ತು.

ಕ್ಸಿ ಜಿನ್ ಪಿಂಗ್ ಸದ್ಯ ಚೆನ್ನೈನ ಐಟಿಸಿ ಗ್ರಾಂಡ್ ಚೋಲಾ ಹೋಟೆಲ್‍ನಲ್ಲಿ ಉಳಿದಿದ್ದಾರೆ. ಇಂದು ಪುನಃ ಪ್ರಧಾನಿ ಮೋದಿ ಮತ್ತು ಜಿನ್ ಪಿಂಗ್ ಭೇಟಿಯಾಗಲಿದ್ದು, ಪ್ರಾದೇಶಿಕಮ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.

Contact Us for Advertisement

Leave a Reply