ನನ್ನನ್ನ ಟೀಕಿಸಿ..ಭಾರತದ ಬೆನ್ನಿಗೆ ಚೂರಿ ಹಾಕಬೇಡಿ: ಮೋದಿ ಕೆಂಡ

ಹರಿಯಾಣ ವಿಧಾನಸಭೆ ಚುನಾವಣೆ ಪ್ರಚಾರದ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಮತ್ತೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. 370ನೇ ವಿಧಿ ರದ್ದತಿ ವಿಚಾರವಾಗಿ ಮಾತನಾಡಿದ ಅವರು, ನನ್ನನ್ನು ನೀವು ಏನಾದ್ರೂ ಕರೆದುಕೊಳ್ಳಿ. ಬ್ಯಾಂಕಾಕ್ ಥೈಲ್ಯಾಂಡ್​​ನಿಂದ ಬೈಗುಳಗಳನ್ನು ಬೇಕಾದ್ರೂ ತರಿಸಿಕೊಳ್ಳಿ. ಆದ್ರೆ ದೇಶದ ಹಿತಕ್ಕಾಗಿ ತೆಗೆದುಕೊಂಡ ನಿರ್ಧಾರವನ್ನು ವಿರೋಧಿಸಬೇಡಿ. ಹಿಂದೂಸ್ತಾನದ ಬೆನ್ನಿಗೆ ಚೂರಿ ಹಾಕಬೇಡಿ ಅಂತ ವಾಗ್ದಾಳಿ ನಡೆಸಿದ್ರು. ಅಲ್ಲದೆ ಜಮ್ಮು ಕಾಶ್ಮೀರ ಮತ್ತು ಲಡಾಕ್ ಭವಿಷ್ಯದ ದೃಷ್ಟಿಯಿಂದ 370ನೇ ವಿಧಿಯನ್ನು ರದ್ದುಪಡಿಸಲಾಗಿದೆ.  ಈ ವಿಚಾರವಾಗಿ ಸುಳ್ಳು ಸುದ್ದಿಗಳನ್ನು ಹರಡಬೇಡಿ ಎಂದು ಕಾಂಗ್ರೆಸ್ಸಿಗರಿಗೆ ಆಗ್ರಹಿಸಿದ್ರು.

ಅಲ್ಲದೆ ನಾನು ಚುನಾವಣೆ ಪ್ರಚಾರಕ್ಕೆ ಹರಿಯಾಣಕ್ಕೆ ಬರೋದಿಲ್ಲ. ಮತ ಕೇಳೋದಕ್ಕೂ ಬರೋದಿಲ್ಲ. ಬಿಜೆಪಿ ರ್ಯಾಲಿಗೋಸ್ಕರ ನಾನು ಇಲ್ಲಿಗೆ ಬರೋದಿಲ್ಲ. ಯಾವಾಗಲೂ ಹರಿಯಾಣ ನನ್ನನ್ನು ಎಳೆದು ತರುತ್ತೆ ಅಂತ ಹೇಳಿದ್ದಾರೆ.

Contact Us for Advertisement

Leave a Reply