ಪಾಕಿಸ್ತಾನ್ ಪುಡಿಪುಡಿ​! 3 ಭಾಗ ಆಗಿ ಒಡೆದುಹೋಗುತ್ತಾ ಪಾಕಿಸ್ತಾನ?

masthmagaa.com:

ಸ್ನೇಹಿತರೇ, ಪಾಕಿಸ್ತಾನ ಅನ್ನೋ ದೇಶನೇ ಈ ಭೂಮಿಯಿಂದ ಮಾಯವಾಗೋ ದಿನ ಮುಂದೆ ಕಾದಿದ್ಯಾ..? ಈ ಪ್ರಶ್ನೆ ಮೂಡೋಕೆ ಕಾರಣ ಪಾಕಿಸ್ತಾನದಲ್ಲಿ ವೇಗ ಪಡೆದುಕೊಂಡಿರೋ ಸಿಂಧು ದೇಶ್ ಸ್ವತಂತ್ರ ದೇಶಕ್ಕಾಗಿ ಹೋರಾಟ. ಈಗಾಗಲೇ ಪಾಕ್ ತನ್ನ ಅತಿದೊಡ್ಡ ಪ್ರಾಂತ್ಯ ಬಲೂಚಿಸ್ತಾನವನ್ನ ಕಳೆದುಕೊಳ್ಳೋ ಹಂತದಲ್ಲಿದೆ. ಇದೇ ಸಂದರ್ಭದಲ್ಲಿ ಮತ್ತೊಂದು ಸಂಪದ್ಭರಿತ ರಾಜ್ಯ ಸಿಂಧ್​ನಲ್ಲಿ ಪ್ರತ್ಯೇಕ ದೇಶಕ್ಕಾಗಿ ಗಲಾಟೆ ಶುರುವಾಗಿದೆ. ಪ್ರತಿಭಟನಾ ರ್ಯಾಲಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವ ನಾಯಕರ ಫೋಟೋಗಳನ್ನ ಪ್ರದರ್ಶಿಸಲಾಗಿದೆ. ಪಾಕಿಸ್ತಾನ ಸರ್ಕಾರವನ್ನ ಒಂದು ಭಯೋತ್ಪಾದಕ ಸರ್ಕಾರ ಅಂತ ಧಿಕ್ಕಾರ ಕೂಗಲಾಗಿದೆ. ಪಾಕಿಗಳು ನಮ್ಮ ಪಕ್ಕದ ಮನೆಯವರಾಗಿರೋದ್ರಿಂದ ಈ ಸುದ್ದಿ ಇವತ್ತಿನ ಅತ್ಯಂತ ಇಂಪಾರ್ಟೆಂಟ್ ಸುದ್ದಿ. ಪಾಕಿಸ್ತಾನ ಚೂರು ಚೂರಾಗೋ ಸ್ಥಿತಿ ನಿರ್ಮಾಣವಾಗಿದೆ. ಇದನ್ನ ಅರ್ಥ ಮಾಡಿಕೊಳ್ಳಬೇಕು ಅಂದ್ರೆ ಇತಿಹಾದಲ್ಲಿ ಸ್ವಲ್ಪ ಹಿಂದಕ್ಕೆ ಹೋಗಬೇಕು.

ಪಾಕಿಸ್ತಾನ… ನಮ್ಮ ಪಕ್ಕದ ದೇಶ. ಮೊದಲು ನಮ್ಮದೇ ಭಾಗ ಆಗಿದ್ರು. ಆದ್ರೆ ಧರ್ಮದ ಆಧಾರದಲ್ಲಿ ಪ್ರತ್ಯೇಕ ದೇಶ ಬೇಕು ಅಂತಾ ಹಟ ಹಿಡಿದು ದೇಶ ಇಬ್ಬಾಗ ಮಾಡಿಸಿಕೊಂಡ್ರು. ಸ್ವಾತಂತ್ರ ಬಂದ ಮೇಲೂ ಭಾರತದಲ್ಲೇ ಇದ್ದರೆ ನಾವು ಉದ್ದಾರ ಆಗಲ್ಲ. ತಾರತಮ್ಯ ಆಗ್ಬೋದು. ಸೋ, ಸೆಪರೇಟ್ ಇದ್ರೆ ಒಳ್ಳೇದು ಅಂತಾ ಪಟ್ಟು ಹಿಡಿದು, ಮಹಮ್ಮದಾಲಿ ಜಿನ್ನಾ ನೇತೃತ್ವದಲ್ಲಿ ಪಾಕಿಸ್ತಾನ ರಚನೆ ಆಯ್ತು. ಪಂಜಾಬ್, ಆಫ್ಘಾನ್ ಪ್ರಾಂತ್ಯ, ಕಾಶ್ಮೀರ್, ಸಿಂಧ್ ಹಾಗೂ ಬಲೂಚಿಸ್ತಾನ್…,ನಿಂದ ಅಕ್ಷರಗಳನ್ನ ಪಡೆದು ಪಾಕಿಸ್ತಾನ್ ಅಂತಾ ಹೆಸರಾಯ್ತು. ಭಾರತ ‘ರಿಪಬ್ಲಿಕ್ ಆಫ್ ಇಂಡಿಯಾ’ ಅಂತ ತನ್ನನ್ನ ಕರೆದುಕೊಳ್ತು. ಆದ್ರೆ ಪಾಕಿಸ್ತಾನ ‘ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ’ ಅಂತ ತನ್ನನ್ನ ತಾನು ಕರೆದುಕೊಳ್ತು.

ಪಾಕಿಸ್ತಾನದ ಸಂಪದ್ಭರಿತ ಪ್ರಾಂತ್ಯ ಸಿಂಧ್​​​ ನಮ್ಮ ಗುಜರಾತ್, ರಾಜಸ್ಥಾನದ ಜೊತೆ ಗಡಿ ಹಂಚಿಕೊಂಡಿದೆ. ಇಲ್ಲಿನ ಜನ ಮೊದಲಿಂದಲೂ ನಮ್ಮದು ಪ್ರತ್ಯೇಕ ನಾಗರಿಕತೆ. ನಾವು ಸ್ವತಂತ್ರ ದೇಶ ಆಗ್ಬೇಕು ಅಂತಾ ಬಯಸ್ತಾನೇ ಬಂದಿದ್ರು. ಪಾಕಿಸ್ತಾನ ಅನ್ನೋ ದೇಶವನ್ನೇ ನಾವು ಒಪ್ಪಲ್ಲ. ನಮ್ಮನ್ನ ಒತ್ತಾಯಪೂರ್ವಕವಾಗಿ ಹಿಡಿದಿಟ್ಟುಕೊಳ್ಳಲಾಗಿದೆ ಅನ್ನೋದು ಇವರ ವಾದ. ನಾವು ಸಾವಿರಾರು ವರ್ಷಗಳಿಂದಲೂ ಪ್ರತ್ಯೇಕ ನಾಗರಿಕತೆ. ಸಿಂಧೂ ಬಯಲಿನ ನಾಗರಿಕತೆ ಹುಟ್ಟಿದ್ದೂ ನಮ್ಮಲ್ಲೇ.. ಭಾರತಕ್ಕೆ ಇಂಡಿಯಾ ಅನ್ನೋ ಹೆಸರು ಕೊಟ್ಟಿದ್ದೂ ನಾವೇ… ನಮ್ಮದು ಪ್ರತ್ಯೇಕ ಗುರುತಿದೆ ಅಂತಾ ಸಿಂಧಿಗಳು ಬಹಳ ಆತ್ಮವಿಶ್ವಾಸದಿಂದ ಮಾತಾಡ್ತಾರೆ. ಜೊತೆಗೆ ಇಡೀ ಪಾಕಿಸ್ತಾನದಲ್ಲಿ ಪಂಜಾಬ್ ಪ್ರಾಂತ್ಯದವರ ದಬ್ಬಾಳಿಕೆ ಮಿತಿಮೀರಿದೆ. ಸೇನೆ, ಹಣಕಾಸು, ರಾಜಕಾರಣ ಎಲ್ಲದರಲ್ಲೂ ಪಾಕಿಸ್ತಾನಿ ಪಂಜಾಬಿಗಳು ಬಿಗಿ ಹಿಡಿತ ಹೊಂದಿದ್ದಾರೆ. ಇದು ಒಂದು ರೀತಿ ಪಂಜಾಬಿ ಇಂಪೀರಿಯಲಿಸಂ ಅಂತಾ ಸಿಂಧಿಗಳು ಆರೋಪ ಮಾಡ್ತಾನೆ ಬಂದಿದ್ದಾರೆ.

ಅದರಲ್ಲೂ ಜಿ.ಎಂ.ಶಾಹ್ ಸೈಯದ್​ರಂತ ನಾಯಕರು ಪಾಕಿಸ್ತಾನದ ಹಿಡಿತದಿಂದ ಹೊರಬಂದು ‘ಸಿಂಧುದೇಶ್’​ ಅನ್ನೋ ಹೊಸ ದೇಶ ಆಗ್ಬೇಕು ಅಂತಾ ಅಹಿಂಸಾ ಹೋರಾಟ ನಡೆಸಿದ್ರು. ಇವರನ್ನ ಪಾಕ್ ಸರ್ಕಾರ 30 ವರ್ಷಗಳಿಗೂ ಅಧಿಕ ಕಾಲ ಬಂಧನದಲ್ಲಿ ಇರಿಸಿತ್ತು. ಇವರನ್ನ ಸಿಂಧುದೇಶ ಚಳವಳಿಯ ಪಿತಾಮಹ ಅಂತಾನೇ ಕರೆಯಲಾಗುತ್ತೆ. ಸೋ, ಸ್ವಾತಂತ್ರ್ಯ ಬಂದಾಗಿನಿಂದಲೂ ಸಿಂಧಿಗಳಿಗೆ ಸಮಾಧಾನ ಇರಲಿಲ್ಲ. ನಮಗೆ ಈ ದೇಶದಲ್ಲಿ ಸಿಗಬೇಕಾದ ಮಾನ್ಯತೆ ಇಲ್ಲ. ಎಲ್ಲವೂ ಪಂಜಾಬಿ ನಿಯಂತ್ರಣದಲ್ಲಿದೆ ಅನ್ನೋ ಸಿಟ್ಟಿತ್ತು. ಆದ್ರೆ ನಂತರದ ದಿನಗಳಲ್ಲಿ ಸಿಂಧ್​​ನಲ್ಲಿ ಹುಟ್ಟಿ ಬೆಳೆದ ಸಿಂಧ್​ ರಾಜಕಾರಣಿ ಝುಲ್ಫಿಕರ್​ ಅಲಿ ಭುಟ್ಟೋ ಪಾಕ್ ಪ್ರಧಾನಿ ಆದ್ರು. ಪ್ರಭಾವಿ ನಾಯಕರಾಗಿ ಬೆಳೆದ್ರು. ನಂತ್ರ ಅವರ ಮಗಳು ಬೆನಝೀರ್ ಭುಟ್ಟೋ ಕೂಡ ಪಾಕ್ ಪ್ರಧಾನಿ ಆದ್ರು. ಈ ಟೈಮಲ್ಲಿ ಸಿಂಧಿಗಳು ಸ್ವಲ್ಪ ಸುಮ್ಮನಿದ್ರು. ನಮ್ಮವರು ಅಧಿಕಾರದಲ್ಲಿದ್ದಾರಲ್ಲಾ ಅನ್ನೋ ಸಮಾಧಾನ ಸಿಂಧಿಗಳಿಗೆ ಇತ್ತು. ಆದ್ರೆ 2007ರಲ್ಲಿ ಬೆನಝೀರ್​ ಭುಟ್ಟೋ ಅವರ ಹತ್ಯೆ ಆಗೋಯ್ತು. ಅಲ್ಲಿಂದ ಮತ್ತೆ ಸಿಂಧ್ ಪ್ರಾಂತ್ಯದಲ್ಲಿ ಸ್ವಾತಂತ್ರ್ಯದ ಕೂಗು ಜೋರಾಗಿದೆ.

ಸಿಂಧುದೇಶದ ಹೋರಾಟಗಾರರು ಓಪನ್ನಾಗಿ ಪ್ರತಿಭಟನಾ ಮೆರವಣಿಗೆಗಳನ್ನ ನಡೆಸಿ ಪಾಕಿಸ್ತಾನ ದೇಶವನ್ನ ‘ಪಂಜಾಬಿ ನಿಯಂತ್ರಣದ ಒಂದು ಭಯೋತ್ಪಾದಕ ದೇಶ’ ಅಂತಾ ಘೋಷಣೆ ಕೂಗ್ತಾರೆ. ಕಳೆದ 70 ವರ್ಷಗಳಲ್ಲಿ ಲೆಕ್ಕವಿಲ್ಲದಷ್ಟು ಸಿಂಧಿ ಚಳವಳಿಗಾರರು, ಹೋರಾಟಗಾರರು, ವಿದ್ಯಾರ್ಥಿಗಳನ್ನ ಪಾಕ್ ಭದ್ರತಾ ಏಜೆನ್ಸಿಗಳು ಕಣ್ಮರೆ ಮಾಡಿವೆ. ಆದ್ರೂ ಸಹ ಯಾವುದೇ ಭಯ ಇಲ್ಲದೆ ಇವ್ರು ಈಗ ಮತ್ತೆ ಹೋರಾಟ ಜೋರು ಮಾಡಿದ್ದಾರೆ. ಇದಕ್ಕೆ ಗಡೆಯಾಚೆಗಿನ ಸಿಂಧಿಗಳೂ ಬೆಂಬಲ ನೀಡ್ತಿದಾರೆ. ಹೌದು… ಸಿಂಧಿಗಳು ನಮ್ಮ ಗುಜರಾತ್, ರಾಜಸ್ಥಾನ, ಹಾಗೂ ಸ್ವಲ್ಪ ನಮ್ಮ ಸೈಡ್​ನ ಪಂಜಾಬ್​ನಲ್ಲೂ ಇದ್ದಾರೆ. ವಿದೇಶಗಳಲ್ಲೂ ಇದ್ದಾರೆ. ಇವರಲ್ಲಿ ಹೆಚ್ಚಿನವರು ದೇಶ ವಿಭಜನೆ ವೇಳೆ ತಮ್ಮ ಆಸ್ತಿಯನ್ನೆಲ್ಲಾ ಅಲ್ಲೆ ಬಿಟ್ಟು ಖಾಲಿ ಕೈಲಿ ಬಂದವರೂ ಇದ್ದಾರೆ. ಇವರೆಲ್ಲಾ ಈಗ ಸಿಂಧುದೇಶ್ ಒಂದು ಪ್ರತ್ಯೇಕ ದೇಶ ಆಗ್ಲಿ ಅಂತ ಹಾರೈಸ್ತಿದ್ದಾರೆ.

ಮತ್ತೊಂದು ಕಡೆ ಬಲೂಚಿಸ್ತಾನ… ಪಾಕಿಸ್ತಾನದ ಅತಿ ದೊಡ್ಡ ಪ್ರಾಂತ್ಯ. ಪಾಕಿಸ್ತಾನದ 30 ಪರ್ಸೆಂಟ್​ಗೂ ಅಧಿಕ ಭೂಭಾಗ ಇರೋ ರಾಜ್ಯ. ಇವ್ರೂ ಕೂಡ ತಮ್ಮನ್ನ ತಾವು ಪಾಕಿಸ್ತಾನದ ಭಾಗ ಅಂತಾ ಒಪ್ಪಲ್ಲ. ನಿಜ ಹೇಳಬೇಕು ಅಂದ್ರೆ ಬಲೂಚಿಸ್ತಾನ ಒಂದು ಪ್ರತ್ಯೇಕ ಭೂಭಾಗ.. ‘ಬಲೂಚಿಸ್ತಾನ್ ರೀಜನ್’.. ಇದು ಪಾಕಿಸ್ತಾನ, ಅಫ್ಘಾನಿಸ್ಥಾನ ಹಾಗೂ ಇರಾನ್​ನಲ್ಲೂ ವ್ಯಾಪಿಸಿಕೊಂಡಿದೆ. ಅಂದ್ರೆ ಈಗ, ಈ ಭೂಭಾಗವನ್ನ ಮೂರು ದೇಶಗಳು ಹರಿದು ಹಂಚಿಕೊಂಡಿವೆ. ಒಂದು ದೊಡ್ಡ ಭಾಗ ‘ಬಲೂಚಿಸ್ತಾನ್ ಪ್ರಾವಿನ್ಸ್’ ಅನ್ನೋ ಹೆಸರಲ್ಲಿ ಪಾಕಿಸ್ತಾನದ ಒಂದು ರಾಜ್ಯ ಆಗಿದೆ. ಆದ್ರೆ ಬಲೂಚಿಗಳು ಮಾತ್ರ ಇಡೀ ಬಲೂಚಿಸ್ತಾನ  ಮತ್ತೆ ಒಂದಾಗಬೇಕು., ಪ್ರತ್ಯೇಕ ದೇಶ ಆಗ್ಬೇಕು ಅಂತ ಸಶಸ್ತ್ರ ಬಂಡಾಯ ಮಾಡಿಕೊಂಡೇ ಬಂದಿದ್ದಾರೆ. ಈ ಹೊರಾಟದಲ್ಲಂತೂ ಅಪಾರ ಪ್ರಮಾಣದಲ್ಲಿ ರಕ್ತ ಹರಿದಿದೆ. ನೈಸರ್ಗಿಕ ಸಂಪತ್ತಿನ ಖಜಾನೆಯಾಗಿರೋ ಈ ಪ್ರದೇಶದವನ್ನ ಹಿಡಿದಿಟ್ಟುಕೊಳ್ಳೋಕೆ ಪಾಕಿಸ್ತಾನ ಸೇನೆ ನಿರತಂತರ ದೌರ್ಜನ್ಯ ಮಾಡಿಕೊಂಡೇ ಬಂದಿದೆ. ಬಲೂಚಿಗಳು ಕೂಡ ‘ಬಲೂಚಿ ಲಿಬರೇಶನ್ ಸೇನೆ’ ಅಂತಾ ಮಾಡಿಕೊಂಡು, ‘ನೀವು ಹತ್ತು ಜೀವ ತೆಗೆದ್ರೆ ನಾವು ನಿಮ್ದು ಎರಡಾದ್ರೂ ತೆಗೀತೀವಿ’ ಅಂತಾ ಪಾಕ್ ಸೈನಿಕರನ್ನ ಬೇಟೆ ಆಡ್ತಾನೇ ಬಂದಿದ್ದಾರೆ.

ಸೋ, ಸ್ವಾತಂತ್ರ ಬಂದು 73 ವರ್ಷ ಕಳೀತು. ಈಗ ಭಾರತ ಒಂದು ಶಕ್ತಿಶಾಲಿ ದೇಶ ಆಗಿ ಹೊರಹೊಮ್ಮಿದ್ರೆ ಪಾಕಿಸ್ತಾನ ಇನ್ನೂ ಒಂದು ಅತಂತ್ರ ಭೂ ಪ್ರದೇಶವಾಗಿನೇ ಉಳಿದುಕೊಂಡಿದೆ. ಅಲ್ಲಿ ಮುಸ್ಲಿಮರೂ ನೆಮ್ಮದಿಯಾಗಿಲ್ಲ.., ಅಲ್ಪಸಂಖ್ಯಾತರೂ ನೆಮ್ಮದಿಯಾಗಿಲ್ಲ. ಅದ್ರ ಮಧ್ಯೆ ಈಗ ಬಲೂಚಿಸ್ತಾನ ಮತ್ತು ಸಿಂಧ್ ಒಡೆದು ಹೊರ ಹೋದರೆ, ಪಾಕಿಸ್ತಾನ ಒಂದು ಸಣ್ಣ ಪಾಳೇಪಟ್ಟಿನಂತೆ ಆಗಿಹೋಗುತ್ತೆ. ಅದರ ಅಸ್ತಿತ್ವಾನೇ ಹೊರಟುಹೋಗುತ್ತೆ. ಪಾಕಿಸ್ತಾನ್ ಅನ್ನೋ ಹೆಸರಿನ ಅರ್ಥವೂ ಹೊರಟುಹೋಗುತ್ತೆ. ಅಷ್ಟು ಕೆಟ್ಟ ಪರಿಸ್ಥಿತಿಯಲ್ಲಿದೆ ಪಾಕಿಸ್ತಾನ. ಆದ್ರೂನು ಅವರಿಗೆ ಭಾರತದ ವಿರುದ್ಧ ಹಗೆ ಸಾಧಿಸೋದು ಬಿಟ್ಟು ಬೇರೆ ಜೀವನವೇ ಇಲ್ಲ ಅನ್ನೋ ಥರ ಮಾಡ್ತಾರೆ. ಕೈಲಿರೋ ಎರಡು ದೊಡ್ಡ ಪ್ರಾಂತ್ಯಗಳು..! ಅರ್ಧ ದೇಶನೇ ಕೈತಪ್ಪಿ ಹೋಗೋ ಥರ ಇದೆ. ಆದ್ರೂ ಅವ್ರಿಗೆ ಕಾಶ್ಮೀರ ಬೇಕು ಅನ್ನೋ ದುರಾಸೆ. ಇದೊಂಥರಾ ಲುಂಗಿ ಹರಿದುಹೋಗ್ತಿದ್ರೂ ಕಿರೀಟ ಬೇಕು ಅಂತಾ ಆಸೆಪಟ್ಟಂಗೆ.

-masthmagaa.com

Contact Us for Advertisement

Leave a Reply