ನೆಹರು ಬಗ್ಗೆ ವಿವಾದಾತ್ಮಕ ಮಾತು.. ಪಾಯಲ್ ವಿರುದ್ಧ ಕೇಸ್..!

ಕಿರುತೆರೆ ನಟಿ ಪಾಯಲ್ ರೋಹಟ್ಗಿ ವಿರುದ್ಧ ರಾಜಸ್ತಾನ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಸೆಪ್ಟೆಂಬರ್ 21ರಂದು ಫೇಸ್‍ಬುಕ್‍ಗೆ ವಿಡಿಯೋ ಹಾಕಿದ್ದ ಪಾಯಲ್ ರೋಹಟ್ಗಿ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಮತ್ತು ಅವರ ಪತ್ನಿ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದರು.

ಪಾಯಲ್ ರೋಹಟ್ಗಿ ವಿರುದ್ಧ ಯೂತ್ ಕಾಂಗ್ರೆಸ್ ಲೀಡರ್ ಚರ್ಮೇಶ್ ಶರ್ಮಾ ದೂರು ನೀಡಿದ್ದರು. ಸೆಕ್ಷನ್ 66, 67 ಐಟಿ ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಾಗಿದೆ.

ಅಲ್ಲದೆ ನೆಹರು ಪತ್ನಿ ನಡತೆ ಬಗ್ಗೆಯೂ ಸುಳ್ಳು ಆರೋಪಗಳನ್ನು ಹೊರಿಸಿ, ಕೆಟ್ಟದಾಗಿ ಮಾತನಾಡಿದ್ದರು. ಜೊತೆಗೆ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಾವಿನ ಬಗ್ಗೆಯೂ ಕೆಲವೊಂದು ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದರು. ಅಲ್ಲದೆ ಸುಳ್ಳು ಆರೋಪಗಳನ್ನು ಹೊರಿಸಿ ನೆಹರೂ ಅವರನ್ನೂ ಸಹ ಅವಮಾನಿಸಿದ್ದಾರೆ ಎಂದು ಚರ್ಮೇಶ್ ಶರ್ಮಾ ಆರೋಪಿಸಿದ್ದಾರೆ.

Contact Us for Advertisement

Leave a Reply