ಸಲಿಂಗ ಕಾಮದ ಗೆಳೆಯನಿಂದಲೇ ಇಸ್ರೋ ವಿಜ್ಞಾನಿ ಕೊಲೆ..!

ಹೈದ್ರಾಬಾದ್‍ನ ಫ್ಲ್ಯಾಟ್‍ನಲ್ಲಿ ನಡೆದಿದ್ದ ಇಸ್ರೋ ವಿಜ್ಞಾನಿ ಕೊಲೆ ರಹಸ್ಯ ಬಯಲಾಗಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನನ್ನು 39 ವರ್ಷದ ಜನಗಾಮಾ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಇನ್ನೊಂದು ಶಾಕಿಂಗ್ ವಿಚಾರ ಅಂದ್ರೆ ಮೃತ ಇಸ್ರೋ ವಿಜ್ಞಾನಿ ಸುರೇಶ್ ಕುಮಾರ್ ಸಲಿಂಗ ಕಾಮಿಯಾಗಿದ್ದರು. ಈಗ ಅರೆಸ್ಟ್ ಆಗಿರೋ ಶ್ರೀನಿವಾಸ್ ಅವರ ಸೆಕ್ಸ್ ಸಂಗಾತಿಯಾಗಿದ್ದರು. ಶ್ರೀನಿವಾಸ್, ಸುರೇಶ್ ಕುಮಾರ್ ಬಳಿ ಹಣ ವಸೂಲಿ ಮಾಡುತ್ತಿದ್ದರು. ಅದೇ ರೀತಿ ಅಕ್ಟೋಬರ್ 30ರಂದು ಸುರೇಶ್ ಕುಮಾರ್ ಮನೆಗೆ ಬಂದಿದ್ದ ಶ್ರೀನಿವಾಸ್ ಚಾಕು ಹಿಡಿದು ಬಂದಿದ್ದಾನೆ. ಸೆಕ್ಸ್ ಮುಗಿಸಿದ ನಂತರ ದುಡ್ಡಿಗೆ ಬೇಡಿಕೆ ಇಟ್ಟಿದ್ದಾನೆ. ಈ ವೇಳೆ ಸುರೇಶ್ ಕುಮಾರ್ ದುಡ್ಡು ನೀಡಲು ನಿರಾಕರಿಸಿದಾಗ ಶ್ರೀನಿವಾಸ್ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ.

ಅಮೀರ್ ಪೇಟೆ ಪ್ರದೇಶದ ಅಣ್ಣಾಪುರ ಅಪಾರ್ಟ್‍ಮೆಂಟ್‍ನಲ್ಲಿ ಎಸ್.ಸುರೇಶ್ ಮೃತದೇಹ ಪತ್ತೆಯಾಗಿತ್ತು. ಕೇರಳ ಮೂಲದ ಸುರೇಶ್ ಫ್ಲಾಟ್‍ನಲ್ಲಿ ಒಬ್ಬರೇ ವಾಸವಾಗಿದ್ದರು. ಅಕ್ಟೋಬರ್ 1ರಂದು ಕಚೇರಿಗೆ ಹೋಗದೇ ಇದ್ದಾಗ ಅವರ ಸಹೋದ್ಯೋಗಿಗಳು ಸುರೇಶ್ ನಂಬರ್‍ಗೆ ಕರೆ ಮಾಡಿದ್ದಾರೆ. ಆದ್ರೆ ಸುರೇಶ್ ಸ್ಪಂದಿಸದೇ ಇದ್ದಾಗ, ಚೆನ್ನೈನಲ್ಲಿ ಬ್ಯಾಂಕ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿರೋ ಅವರ ಪತ್ನಿ ಇಂದಿರಾಗೆ ವಿಷಯ ತಿಳಿಸಿದ್ದಾರೆ. ಸುರೇಶ್ ಪತ್ನಿ ತನ್ನ ಕುಟುಂಬಸ್ಥರೊಂದಿಗೆ ಬಂದು ಹೈದರಾಬಾದ್ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಂತರ ಬಾಗಿಲು ಒಡೆದು ಫ್ಲಾಟ್ ಒಳನುಗ್ಗಿದಾಗ ಸುರೇಶ್ ಮೃತದೇಹ ಪತ್ತೆಯಾಗಿತ್ತು.

ಸುರೇಶ್ ಕಳೆದ 20 ವರ್ಷಗಳಿಂದ ಇಲ್ಲೇ ವಾಸವಾಗಿದ್ದರು. ಅವರ ಪತ್ನಿ ಇಂದಿರಾ ಕೂಡ ಸುರೇಶ್ ಜೊತೆಯೇ ವಾಸವಾಗಿದ್ದರು. ಆದ್ರೆ 2005ರಲ್ಲಿ ಚೆನ್ನೈಗೆ ವರ್ಗಾವಣೆಯಾಗಿದ್ದರು.

Contact Us for Advertisement

Leave a Reply