ಜಮ್ಮು ಕಾಶ್ಮೀರದಲ್ಲಿ ಇಂದಿನಿಂದ ರಿಂಗ್ ಆಗಲಿದೆ ಮೊಬೈಲ್​​..!

ಜಮ್ಮು ಕಾಶ್ಮೀರದಲ್ಲಿ ಇವತ್ತಿನಿಂದ ಪೋಸ್ಟ್​ ಪೇಯ್ಡ್​ ಮೊಬೈಲ್ ಸೇವೆ ಆರಂಭವಾಗಲಿದೆ. ಹೀಗಾಗಿ ಬರೋಬ್ಬರಿ 70 ದಿನಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊಬೈಲ್​ಗಳು ರಿಂಗ್ ಆಗಲಿವೆ. ಸುಮಾರು 40 ಲಕ್ಷ ಮೊಬೈಲ್ ಫೋನ್​ಗಳು ಆಕ್ಟೀವ್ ಆಗಲಿದೆ. ರಾಜ್ಯ ಸರ್ಕಾರ 2 ದಿನಗಳ ಹಿಂದಷ್ಟೇ ಪೋಸ್ಟ್ ಪೇಯ್ಡ್​ ಸೇವೆಗಳ ಮೇಲಿನ ನಿರ್ಬಂಧ ತೆರವುಗೊಳಿಸುವ ನಿರ್ಧಾರ ಕೈಗೊಂಡಿತ್ತು.

ಸದ್ಯ ಮೊಬೈಲ್ ಮೂಲಕ ಕರೆ ಮಾಡುವ ಅವಕಾಶವನ್ನು ಸರ್ಕಾರ ನೀಡುತ್ತಿದೆ. ಆದ್ರೆ ಇಂಟರ್ನೆಟ್ ಸೇವೆಗಾಗಿ ಜನ ಇನ್ನೊಂದಷ್ಟು ದಿನ ಕಾಯಬೇಕಾಗಿದೆ. ಜೊತೆಗೆ ಪ್ರೀಪೇಯ್ಡ್​ ಗ್ರಾಹಕರೂ ಕೂಡ ಇನ್ನೊಂದಷ್ಟು ದಿನ ಕಾಯಬೇಕಾಗುತ್ತದೆ.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ಆಗಸ್ಟ್ 5ರಂದು ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಲ್ಲಿ ಮೊಬೈಲ್ ಮತ್ತು ಇಂಟರ್ನೆಟ್  ಸೇವೆಗಳನ್ನು ಬಂದ್ ಮಾಡಲಾಗಿತ್ತು. ಕೇವಲ ಲಡಾಕ್​ನಲ್ಲಿ ಮಾತ್ರವೇ ಮೊಬೈಲ್ ಸೇವೆಗೆ ಅವಕಾಶ ನೀಡಲಾಗಿತ್ತು.

Contact Us for Advertisement

Leave a Reply