ಆಸ್ತಿ ಬರೆದು ಕೊಡ್ತೀನಿ ಎಂದ ಜಮೀರ್​ಗೆ ಪ್ರಶಾಂತ್ ಸಂಬರಗಿ ಚಾಲೆಂಜ್..!

masthmagaa.com:

ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಆರೋಪಿಸಿದಂತೆ ನಾನು ಸಂಜನಾ ಜೊತೆ ಶ್ರೀಲಂಕಾದಲ್ಲಿ ನಡೆದ ಪಾರ್ಟಿಯಲ್ಲಿ ಭಾಗವಹಿಸಿದ್ದು ಸಾಬೀತಾದರೆ ನನ್ನ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಡುತ್ತೇನೆ ಅಂತ ಸವಾಲು ಹಾಕಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್​ಗೆ ಪ್ರಶಾಂತ್ ಸಂಬರಗಿ ಕೌಂಟರ್ ಕೊಟ್ಟಿದ್ದಾರೆ. ಶ್ರೀಲಂಕಾಗೆ ಜಮೀರ್ ಅಹ್ಮದ್ ಖಾನ್ ಹೋಗಿಲ್ಲ ಅಂದ್ರೆ ತಮ್ಮ ಪಾಸ್​ಪೋರ್ಟ್​ನ ಪ್ರತಿಯನ್ನು ಮಾಧ್ಯಮಗಳ ಮುಂದೆ ತೋರಿಸಲಿ ಅಂತ ಚಾಲೆಂಜ್ ಹಾಕಿದ್ದಾರೆ.

ಪ್ರಶಾಂತ್ ಸಂಬರಗಿ ಹೇಳಿದ್ದೇನು..?

2019ರ ಜೂನ್ 8ರಂದು ನೀವು (ಜಮೀರ್ ಅಹ್ಮದ್ ಖಾನ್) ಶ್ರೀಲಂಕಾದ ಕೊಲೊಂಬೋದಲ್ಲಿರುವ ಕ್ಯಾಸಿನೋದಲ್ಲಿ ಕಾಣಿಸಿಕೊಂಡಿದ್ದೀರಾ..? ಇದಕ್ಕೆ ಹೌದು ಅಥವಾ ಇಲ್ಲ ಅಂತ ಉತ್ತರ ಕೊಡಿ. ಗ್ಯಾಂಬ್ಲಿಂಗ್​ ಬಗ್ಗೆ ಕರ್ನಾಟಕದ ಯುವ ಜನತೆಗೆ ನೀವು ನೀಡುವ ಸಂದೇಶ ಏನು..? ಗ್ಯಾಂಬ್ಲಿಂಗ್ ಬಗ್ಗೆ ನಿಮ್ಮ ಪಕ್ಷದ ನಿಲುವೇನು..? ಅಂತ ಟ್ವೀಟ್ ಮೂಲಕ ಅವರನ್ನು ಕೇಳಿದ್ದೆ. ಆದ್ರೆ ನನ್ನ ಟ್ವೀಟ್ ಅನ್ನು ತಿರುಚಿ ನನ್ನ ಮೇಲೆ ಕಂಪ್ಲೇಂಟ್ ಕೊಡಲಾಗಿದೆ. ಜನರ ದಾರಿಯನ್ನು ತಪ್ಪಿಸಲಾಗ್ತಿದೆ.

ಜಮೀರ್ ಅಹ್ಮದ್ ಖಾನ್ ಸಂಜನಾ ಜೊತೆ ಹೋಗಿದ್ದರೋ, ಇಲ್ವೋ ಅಂತ ನಾನು ಕೇಳಿಲ್ಲ. ಸಂಜನಾ ಜೊತೆ ಹೋದ್ರೋ, ಐಶ್ವರ್ಯಾ ರೈ ಜೊತೆ ಹೋದ್ರೋ, ಕತ್ರಿನಾ ಕೈಫ್ ಜೊತೆ ಹೋದ್ರೋ ಅನ್ನೋದು ನನ್ನ ಆರೋಪ ಅಲ್ಲ. ಜೂನ್ 8ರಂದು ಕೊಲೊಂಬೋದ ಕ್ಯಾಸಿನೋದಲ್ಲಿ ಜಮೀರ್ ಅಹ್ಮದ್ ಖಾನ್​ ಇದ್ರೋ, ಇಲ್ವೋ..? ಅನ್ನೋದು ನನ್ನ ಆರೋಪ. ಇದನ್ನು ತಿರುಚಿ ಸಂಜನಾ ಜೊತೆ ನಾನು ಇದ್ದಿದ್ದು ಸಾಬೀತಾದ್ರೆ ಸರ್ಕಾರಕ್ಕೆ ಆಸ್ತಿ ಬರೆದು ಕೊಡ್ತೀನಿ ಅಂತಿದ್ದಾರೆ. ಇಷ್ಟೆಲ್ಲಾ ಮಾತನಾಡೋ ಮಾನ್ಯ ಶಾಸಕರು ಪಾಸ್​ಪೋರ್ಟ್​ ಕಾಪಿಯನ್ನು ಮಾಧ್ಯಮಗಳ ಮುಂದೆ ತೋರಿಸಿದ್ರೆ ಎಲ್ಲವೂ ಸ್ಪಷ್ಟವಾಗುತ್ತೆ.

ಡ್ರಗ್ಸ್ ಪ್ರಕರಣದಲ್ಲಿ ಜಮೀರ್ ಅವರನ್ನು ನಾನು ಲಿಂಕ್ ಮಾಡ್ತಿಲ್ಲ. ಆದ್ರೆ ಜಮೀರ್ ಅವರ ಆಪ್ತ ಶೇಖ್ ಫಾಝಿಲ್​ ಕ್ಯಾಸಿನೋದಲ್ಲಿ ಹಣ ಹೂಡಿಕೆ ಮಾಡಿರುವ ಅನುಮಾನವಿದೆ. ಜಮೀರ್ ಮತ್ತು ಶೇಖ್ ಫಾಝಿಲ್​ ನಂಟು 15 ವರ್ಷ ಹಳೇದು. ಪ್ರತಿವರ್ಷ ಈದ್, ರಂಜಾನ್, ಹಜ್ ಬಂದಾಗಲೆಲ್ಲಾ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ತಾರೆ.

-masthmagaa.com

Contact Us for Advertisement

Leave a Reply