‘ಕಲ್ಲಿದ್ದಲು ಬೇಜಾನ್ ಇದೆ! ಆಮದನ್ನೇ ಬಂದ್ ಮಾಡ್ತಿದೀವಿ’ – ಕಲ್ಲಿದ್ದಲು ಸಚಿವ

masthmagaa.com:

ಕಲ್ಲಿದ್ದಲು ಇಲ್ಲದೆ ಭಾರತವೂ ಕರೆಂಟ್ ಕ್ರೈಸಿಸ್ ನ ಹೊಸ್ತಿಲಿಗೆ ಬಂದು ನಿಂತಿತ್ತು. ಆದ್ರೆ ಈಗ ಪರಿಸ್ಥಿತಿ ಸುಧಾರಿಸ್ತಿರೋ ಹಾಗೆ ಕಾಣಿಸ್ತಿದೆ. ಈ ಬಗ್ಗೆ ಮಾತಾಡಿರೋ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ, ದೇಶದಲ್ಲಿ ಕಲ್ಲಿದ್ದಲು ಕೊರತೆ ಆಗಿದ್ದು ನಿಜ. ಇದನ್ನು ನಾವು ಅವಕಾಶವಾಗಿ ಬಳಸಿಕೊಂಡಿದ್ದೇವೆ. ದೇಶದಲ್ಲಿ ಲಭ್ಯವಿರುವ ಕಲ್ಲಿದ್ದಲನ್ನೇ ಅಪಾರ ಪ್ರಮಾಣದಲ್ಲಿ ಪೂರೈಸಲಾಗುತ್ತಿದೆ ಅಂತ ಹೇಳಿದ್ದಾರೆ. ತೀವ್ರ ಮಳೆ ಹಾಗೂ ವಿದೇಶದಲ್ಲಿ ಕಲ್ಲಿದ್ದಲಿನ ರೇಟು ಹೆಚ್ಚಾಗಿದ್ದಕ್ಕೆ ದೇಶದಲ್ಲಿ ಕಲ್ಲಿದ್ದಲು ಕೊರತೆ ಆಗಿತ್ತು. ಆದ್ರೆ ಈಗ ಸ್ವದೇಶಿ ಕಲ್ಲಿದ್ದಲನ್ನೆ ಅಪಾರ ಪ್ರಮಾಣದಲ್ಲಿ ಒದಗಿಸಲಾಗುತ್ತಿದೆ. ಸೋ ಹೊರಗಿಂದ ತರಿಸಿಕೊಳ್ಳೋದನ್ನ ಸಂಪೂರ್ಣವಾಗಿ ನಿಲ್ಲಿಸಲು ತೀರ್ಮಾನ ಮಾಡಿದ್ದೇವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply