ಗೋವುಗಳು ಕಸಾಯಿಖಾನೆಗೆ ಹೋಗೋದು ನಿಲ್ಲಿಸದಿದ್ರೆ ಹೋರಾಟ ಮಾಡ್ಬೇಕಾಗುತ್ತೆ ಎಂದ ಪ್ರಮೋದ್‌ ಮುತಾಲಿಕ್‌!

masthmagaa.com:

ರಾಜ್ಯದಲ್ಲಿ ಶಾಂತಿ‌ ಕದಡಿದ್ರೆ ಸಂವಿಧಾನದ ಶಕ್ತಿ ತೋರಿಸಬೇಕಾಗುತ್ತೆ ಅಂತ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಪ್ರತಿಕ್ರಿಯಿಸಿದ್ದಾರೆ. ಇದು ಎಲ್ಲರೂ ಹೇಳುವಂಥ ಮಾತು, ಯಾರೂ ಕೂಡ ಶಾಂತಿ‌ ಕದಡುವ ಕೆಲಸ ಮಾಡಲೇಬಾರದು. ಸಂವಿಧಾನ ಬದ್ಧವಾಗಿ, ಪ್ರಜಾಪ್ರಭುತ್ವದ ಆಧಾರದಲ್ಲಿ ಕಾನೂನ ಬದ್ಧ ಪ್ರಕ್ರಿಯೆ ಮಾಡಬೇಕು. ಶ್ರೀರಾಮಸೇನೆ, ವಿಶ್ವ ಹಿಂದೂ ಪರಿಷತ್​, ಭಜರಂಗದಳ ಸಂಘಟನೆಗಳು ಶಾಂತಿ‌ ಕದಡುವ ಅನಾವಶ್ಯಕ ಕಾನೂನ ಬಾಹಿರ ಯಾವುದೇ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ. ಆದ್ರೆ ಗೋಹತ್ಯೆ ನಿಷೇಧ ಇದ್ದರೂ ಕಸಾಯಿಖಾನೆಗೆ ಗೋವುಗಳು ಹೋಗುತ್ತಿವೆ. ಇದು ಸರ್ಕಾರಕ್ಕೆ, ಕಾಂಗ್ರೆಸ್​ನವರಿಗೆ ಹಾಗೂ ಪೊಲೀಸ್ ಇಲಾಖೆಗೂ ಗೊತ್ತು. ಅದನ್ನು‌ ನಿಲ್ಲಿಸದಿದ್ರೆ, ಹೋರಾಟ ಮಾಡಬೇಕಾಗುತ್ತೆ. ಈ ವಿಚಾರವಾಗಿ ಸಂಘರ್ಷ ಆದ್ರೆ ಅದಕ್ಕೆ ಸರ್ಕಾರ, ಪೊಲೀಸ್ ಇಲಾಖೆಯೇ ನೇರ ಕಾರಣ ಅಂತ ಮುತಾಲಿಕ್‌ ವಾಗ್ದಾಳಿ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply