masthmagaa.com:

ಒಂದ್ಕಡೆ ಇವತ್ತು ಪ್ರಧಾನಿ ಮೋದಿ (70 ವರ್ಷ) ಲಸಿಕೆ ಹಾಕ್ಕೊಂಡ ಬೆನ್ನಲ್ಲೇ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು (71 ವರ್ಷ), ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ (80 ವರ್ಷ), ರಾಜಸ್ಥಾನ ರಾಜ್ಯಪಾಲ ಕಲ್ರಾಜ್ ಮಿಶ್ರಾ (79 ವರ್ಷ), ಒಡಿಶಾ ಸಿಎಂ ನವೀನ್ ಪಟ್ನಾಯಕ್ (74 ವರ್ಷ), ಬಿಹಾರ ಸಿಎಂ ನಿತೀಶ್ ಕುಮಾರ್ (70 ವರ್ಷ), ವಿದೇಶಾಂಗ ವ್ಯವಹಾರಗಳ ಸಚಿವ ಎಸ್​. ಜೈಶಂಕರ್ (66 ವರ್ಷ), ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ (64 ವರ್ಷ) ಮುಂತಾದವರು ಇವತ್ತು ಕೊರೋನಾ ಲಸಿಕೆಯ ಮೊದಲ ಡೋಸ್​ ಹಾಕಿಸಿಕೊಂಡ್ರು. ಸುಪ್ರೀಂಕೋರ್ಟ್ ಜಡ್ಜ್ ಮತ್ತು ಅವರ ಕುಟುಂಬ ಸದಸ್ಯರಿಗೆ ನಾಳೆ ಕೊರೋನಾ ಲಸಿಕೆ ಹಾಕಲಾಗುತ್ತೆ. ಜಡ್ಜ್​​ಗಳಿಗೆ ತಮಗಿಷ್ಟ ಬಂದ ಲಸಿಕೆಯನ್ನ ಆಯ್ಕೆ ಮಾಡಿಕೊಳ್ಳಲು ಅವಕಾಶ ಕೊಡಲಾಗುತ್ತೆ ಅಂತ ಕೆಲವೊಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ಬಗ್ಗೆ ಸ್ಪಷ್ಟನೆ ಕೊಟ್ಟ ಕೇಂದ್ರ ಆರೋಗ್ಯ ಇಲಾಖೆ ಯಾರಿಗೂ ಲಸಿಕೆ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಿಲ್ಲ ಅಂತ ಹೇಳ್ತು. ಜನಸಾಮಾನ್ಯರಿಗೂ ಇಲ್ಲ, ಪ್ರಧಾನಿಗೂ ಇಲ್ಲ, ಸುಪ್ರೀಂಕೋರ್ಟ್​ ಜಡ್ಜ್​ಗಳಿಗೂ ಇದಕ್ಕೆ ಅವಕಾಶವಿಲ್ಲ. ಎಲ್ಲರಿಗೂ ಸೇಮ್ ರೂಲ್ಸ್ ಅಂತ ಹೇಳಿದೆ.

-masthmagaa.com

 

Contact Us for Advertisement

Leave a Reply