ಈ ಲಸಿಕೆ ಪಡೆದ 6 ತಿಂಗಳ ನಂತರವೂ ಕೊರೋನಾ ವಿರುದ್ಧ ಶಕ್ತಿ

masthmagaa.com:

ಕೊರೋನಾ ಲಸಿಕೆ ಪಡೆದ ಬಳಿಕ ಅದು ಎಷ್ಟು ದಿನ ನಮಗೆ ರಕ್ಷಣೆ ನೀಡುತ್ತೆ ಅನ್ನೋ ಪ್ರಶ್ನೆ ಸಾಕಷ್ಟು ಜನರಿಗೆ ಇರುತ್ತೆ. ಅಮೆರಿಕದ ಮೊಡೆರ್ನಾ ಕಂಪನಿಯ ಲಸಿಕೆ ಎರಡನೇ ಡೋಸ್​ ಹಾಕಿಸಿಕೊಂಡ 6 ತಿಂಗಳ ಬಳಿಕವೂ ರಕ್ಷಣೆ ನೀಡುತ್ತಿದೆ ಅಂತ ಕಂಪನಿ ಹೇಳಿಕೊಂಡಿದೆ. ಜೊತೆಗೆ ತನ್ನ ಲಸಿಕೆ ಈ ಹಿಂದೆ ಇದ್ದಂತೇ 90 ಪರ್ಸೆಂಟ್​ಗೂ ಹೆಚ್ಚು ಪರಿಣಾಮಕಾರಿ ಅಂತಾನೂ ಹೇಳಿದೆ. ಅಲ್ಲದೆ ರೂಪಾಂತರಿ ಕೊರೋನಾ ವೈರಾಣುವಿನಿಂದಲೂ ರಕ್ಷಣೆ ನೀಡಬಲ್ಲ ಲಸಿಕೆ ಬಗ್ಗೆ ಪರೀಕ್ಷೆ ನಡೆಸುತ್ತಿದ್ದೇವೆ ಅಂತ ಮೊಡೆರ್ನಾ ಕಂಪನಿ ಹೇಳಿದೆ. ಲಸಿಕೆ ಬಗ್ಗೆ ಮೊಡೆರ್ನಾ ಕಂಪನಿ ತನ್ನ ಹೂಡಿಕೆದಾರರಿಗೆ ಆಗಾಗ ಮಾಹಿತಿ ನೀಡ್ತಾ ಇರುತ್ತೆ. ಈ ವೇಳೆ ಈ ವಿಚಾರವನ್ನ ಹೇಳಿದೆ.

-masthmagaa.com

Contact Us for Advertisement

Leave a Reply