ಬೆಂಗಳೂರಿಗರೇ..ಇವತ್ತು ಮನೆಯಿಂದ ಬರೋ ಮುನ್ನ ಎಚ್ಚರ..

ಪ್ರವಾಹ ಪರಿಹಾರಕ್ಕಾಗಿ ಇವತ್ತು ಉತ್ತರ ಕರ್ನಾಟಕ ಜನ ಬೆಂಗಳೂರಿನಲ್ಲಿ ಬೀದಿಗಿಳಿಯಲಿದ್ದಾರೆ. ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ನೇತೃತ್ವದಲ್ಲಿ ಬೃಹತ್ ರ್ಯಾಲಿ ನಡೆಯಲಿದೆ. ರಾಜಾಜಿನಗರದ ಬಾಷ್ಯಂ ವೃತ್ತದಿಂದ ಆರಂಭವಾಗಲಿರುವ ಈ ರ್ಯಾಲಿ ಫ್ರೀಡಂಪಾರ್ಕ್‍ವರೆಗೂ ಸಾಗಲಿದೆ. ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಾವಿರಾರು ಜನ ಈ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದು, ಪರಿಹಾರ ನೀಡುವಂತೆ ರಾಜ್ಯಪಾಲರು ಮತ್ತು ಸಿಎಂ ಯಡಿಯೂರಪ್ಪಗೆ ಮನವಿ ಪತ್ರ ಸಲ್ಲಿಸಲಿದ್ದಾರೆ. ಇನ್ನು ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಲಿದ್ದು, ಪ್ರಯಾಣಿಕರು ಸ್ವಲ್ಪ ಎಚ್ಚರವಾಗಿದ್ರೆ ಒಳ್ಳೆಯದು.

ಉತ್ತರ ಕರ್ನಾಟಕದವರು ಬೆಂಗಳೂರಿನಲ್ಲಿ ಪ್ರತಿಭಟನೆಗೆ ಇಳಿದಿದ್ರೆ, ಅತ್ತ ಸಿಎಂ ಯಡಿಯೂರಪ್ಪ ಇಂದಿನಿಂದ 3 ದಿನಗಳ ಕಾಲ ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಯಾದಗಿರಿ, ಬೆಳಗಾವಿ, ಅಥಣಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಭೇಟಿ ನೀಡಿ, ಪ್ರವಾಹ ಪರಿಸ್ಥಿತಿ ಪರಿಶೀಲನೆ ನಡೆಸಲಿದ್ದಾರೆ.

Contact Us for Advertisement

Leave a Reply