PS-2 ಜೂನ್‌ 2ರಿಂದ ಅಮೆಜಾನ್‌ ಪ್ರೈಮ್‌ನಲ್ಲಿ ಲಭ್ಯ!

masthmagaa.com:

ಪ್ಯಾನ್‌ ಇಂಡಿಯಾ ಪೊನ್ನಿಯನ್‌ ಸೆಲ್ವನ್‌ 2 ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆ ಕಲೆಕ್ಷನ್‌ ಮಾಡಿತ್ತು. ರಿಲೀಸ್‌ ಆದ 25 ದಿನಗಳಲ್ಲಿ 350 ಕೋಟಿಗೂ ಹೆಚ್ಚು ಹಣವನ್ನು ಬಾಕ್ಸ್ ಆಫೀಸ್​ನಲ್ಲಿ ಕಲೆಕ್ಷನ್ ಮಾಡಿತ್ತು. ಏಪ್ರಿಲ್ 28 ರಂದು ಐದು ಭಾಷೆಗಳಲ್ಲಿ ರಿಲೀಸ್‌ ಆದ ಈ ಚಿತ್ರ ಇದೀಗ ಒಟಿಟಿಗೆ ಬರೋಕೆ ರೆಡಿಯಾಗಿದೆ.

ಈಗಾಗಲೇ ಪೊನ್ನಿಯನ್‌ ಸೆಲ್ವನ್‌ ಭಾಗ 1 ಅಮೇಜಾನ್‌ ಪ್ರೈಮ್‌ನಲ್ಲಿ ಸಿಗತ್ತೆ. ಈಗ ಪೊನ್ನಿಯನ್‌ ಸೆಲ್ವನ್‌ ಚಿತ್ರದ 2 ನೇ ಭಾಗ ಕೂಡ ಅಮೇಜಾನ್‌ ಪ್ರೈಮ್‌ನಲ್ಲೇ ರಿಲೀಸ್‌ ಆಗಲಿದೆ. ಪೊನ್ನಿಯಿನ್ ಸೆಲ್ವನ್ 2 ಸಿನಿಮಾ ಜೂನ್ 2 ರಂದು ಒಟಿಟಿಯಲ್ಲಿ ಬಿಡುಗಡೆ ಆಗಲಿದೆ.

ವಿಕ್ರಂ, ಐಶ್ವರ್ಯಾ ರೈ, ತ್ರಿಷಾ, ಕಾರ್ತಿ, ಜಯಂ ರವಿ, ಶೋಭಿತಾ ದುಲಿಪಾಲ, ಐಶ್ವರ್ಯಾ ಲಕ್ಷ್ಮಿ ಸೇರಿದಂತೆ ಇನ್ನೂ ಹಲವು ಸ್ಟಾರ್ ನಟ-ನಟಿಯರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪೊನ್ನಿಯಿನ್ ಸೆಲ್ವನ್ ಕಾದಂಬರಿಯನ್ನೇ ಮಣಿರತ್ನಂ ಅವರು ಎರಡು ಭಾಗಗಳನ್ನಾಗಿ ಮಾಡಿ ಸಿನಿಮಾ ಮಾಡಿದ್ದಾರೆ. ಕಾದಂಬರಿಯಲ್ಲಿ ಕೆಲವೊಂದು ಕಡೆ ಬದಲಾವಣೆ ಮಾಡಿ ಸಿನಿಮಾ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply