ಡ್ರೋನ್ ಮೂಲಕ ಶಸ್ತ್ರಾಸ್ತ್ರ ಕಳುಹಿಸಿದ ಪಾಕ್..!

ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಉರಿದುಕೊಂಡಿರೋ ಪಾಕಿಸ್ತಾನ ತಣ್ಣಗಾಗೋ ಲಕ್ಷಣ ಕಾಣಿಸುತ್ತಿಲ್ಲ. ಪಾಕಿಸ್ತಾನದ ಗುಪ್ತಚರ ದಳ ಐಎಸ್‍ಐ ಪಂಜಾಬ್ ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ 26/11ರ ಮಾದರಿಯಲ್ಲಿ ದಾಳಿ ನಡೆಸಲು ಸಿದ್ಧತೆ ನಡೆಸಿದೆ. ಇದಕ್ಕಾಗಿ ಐಎಸ್‍ಐ ಡ್ರೋನ್‍ಗಳ ಮೂಲಕ ಪಂಜಾಬ್‍ನಲ್ಲಿ ಎಕೆ-47 ಮತ್ತು ಇತರೆ ಆಯುಧಗಳನ್ನು ಡೆಲಿವರಿ ಮಾಡಿತ್ತು. ಭಾನುವಾರ ಪಂಜಾಬ್ ಪೊಲೀಸರು ತರನ್ ತಾರನ್ ಜಿಲ್ಲೆಯಲ್ಲಿ ನಾಲ್ವರು ಖಲಿಸ್ತಾನ ಜಿಂದಾಬಾದ್ ಪಡೆಯ ಉಗ್ರರನ್ನು ವಶಕ್ಕೆ ಪಡೆದಿದ್ದಾರೆ. ಈ ನಾಲ್ವರು ಬಿಳಿ ಬಣ್ಣದ ಮಾರುತಿ ಸ್ವಿಫ್ಟ್ ಕಾರನ್ನು ಬಳಸುತ್ತಿದ್ದರು. ಅವರಿಂದ 5 ಎಕೆ-47 ರೈಫಲ್, 472 ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ದಾಳಿಯ ವೇಳೆ ಸಂಪರ್ಕದಲ್ಲಿರಲು ಸೆಟಲೈಟ್ ಫೋನ್ ಕಳುಹಿಸಿದ್ದ ಐಎಸ್‍ಐ, ನಕಲಿ ನೋಟುಗಳನ್ನೂ ಕಳುಹಿಸಿತ್ತು.

Contact Us for Advertisement

Leave a Reply