ಕಳೆದು ಹೋದವರನ್ನ ಹುಡುಕಲು QR ಕೋಡ್‌ ಅಸ್ತ್ರ! ಹೇಗೆ ಗೊತ್ತಾ?

masthmagaa.com:

ವಯಸ್ಸಾದವರು ಹಾಗೂ ಮರೆವಿನ ಖಾಯಿಲೆ ಇರೋರು ಎಲ್ಲಾದರೂ ಕಳೆದು ಹೋದ್ರೆ ಇನ್ಮುಂದೆ ಚಿಂತಿಸುವ ಅಗತ್ಯವಿಲ್ಲ. ಯಾಕಂದ್ರೆ ಕ್ಯುಆರ್‌ ಕೋಡ್‌ ಅವಳಡಿಸಿ ಡಿಸೈನ್‌ ಮಾಡಲಾದ ಪೆಂಡೆಂಟ್‌ಗಳನ್ನ ಬಳಸಿ ಕಳೆದು ಹೋದ ವ್ಯಕ್ತಿಗಳು ಅವರ ಕುಟುಂಬಸ್ಥರನ್ನ ಸೇರಬಹುದು. ಈ ಇನ್ನೋವೇಟಿವ್‌ ಐಡಿಯಾವನ್ನ ಮುಂಬೈನ ಅಕ್ಷಯ್‌ ರಿಡ್ಲನ್‌ ಅನ್ನೋ ಇಂಜಿನಿಯರ್‌ ಅಭಿವೃದ್ಧಿಪಡಿಸಿದ್ದಾರೆ. ಈ ಪ್ರಾಜೆಕ್ಟ್‌ ಚೇತನ ಅನ್ನೋ ಇನಿಷಿಯೇಟಿವ್‌ ಬುದ್ಧಿಮಾಂದ್ಯ ಹಾಗೂ ಹಿರಿಯ ನಾಗರಿಕರಿಗೆ ಕಸ್ಟಮೈಸ್‌ ಪೆಂಡೆಂಟ್‌ಗಳನ್ನ ಮಾಡಿಕೊಡುವ ಉದ್ಧೇಶ ಹೊಂದಿದೆ. ಇದ್ರಲ್ಲಿ ವ್ಯಕ್ತಿಯ ಬೇಸಿಕ್‌ ಇನ್ಫರ್ಮೇಶನ್‌ ಇರಲಿದ್ದು, ಸ್ಕ್ಯಾನ್‌ ಮಾಡಿ ಅವರ ವಿಳಾಸಕ್ಕೆ ತಲುಪಿಸಲು ಸಹಾಯವಾಗಲಿದೆ ಅಂತ ಅಕ್ಷಯ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply