Testನಲ್ಲಿ ಹೊಸ ದಾಖಲೆ ಬರೆದ ರವಿಚಂದ್ರನ್ ಅಶ್ವಿನ್..!

ಟೀಂ ಇಂಡಿಯಾ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಹೊಸ ದಾಖಲೆ ಬರೆದಿದ್ದಾರೆ. ಅತೀ ವೇಗವಾಗಿ 350 ವಿಕೆಟ್ ಕಿತ್ತ ವಿಚಾರದಲ್ಲಿ ಶ್ರೀಲಂಕಾ ಮಾಜಿ ಆಟಗಾರ ಮುತ್ತಯ್ಯ ಮುರಳೀಧರನ್ ಜೊತೆ ಸ್ಥಾನ ಪಡೆದಿದ್ದಾರೆ. 66ನೇ ಪಂದ್ಯದಲ್ಲಿ ಅಶ್ವಿನ್ ಈ ಸಾಧನೆ ಮಾಡಿದ್ದಾರೆ. ಮುತ್ತಯ್ಯ ಮುರಳೀಧರನ್ ಕೂಡ 2001ರಲ್ಲಿ ತಮ್ಮ 66ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ಸೌತ್ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದ ಅಂತಿಮ ದಿನವಾದ ಇಂದು ಯೂನಿಸ್ ಡಿ ಬ್ರುಯಿನ್ ಅವರ ವಿಕೆಟ್ ಕೀಳುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಜೊತೆಗೆ ಅತೀ ವೇಗವಾಗಿ 350 ವಿಕೆಟ್ ಪಡೆದ ಭಾರತದ ಏಕೈಕ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ವಿಶಾಖಪಟ್ಟಣನಲ್ಲಿ ನಡೆದ ಈ ಪಂದ್ಯದ ಮೊದಲ ಇನ್ನಿಂಗ್ಸ್‍ನಲ್ಲಿ ಅಶ್ವಿನ್ 7 ವಿಕೆಟ್ ಪಡೆದಿದ್ದರು. ಸೌತ್ ಆಫ್ರಿಕಾಗೆ ಭಾರತ ನಿನ್ನೆ 395 ರನ್ ಟಾರ್ಗೆಟ್ ಕೊಟ್ಟಿತ್ತು. ಆದ್ರೆ ಸೌತ್ ಆಫ್ರಿಕಾ 117 ರನ್‍ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಭಾರತದ ಗೆಲುವು ಬಹುತೇಕ ಪಕ್ಕಾ ಆಗಿದೆ.

Contact Us for Advertisement

Leave a Reply