10 ಲಕ್ಷ ವೀಕ್ಷಣೆ ಕಂಡ ಮಾನ್ಸೂನ್ ರಾಗ ಚಿತ್ರದ ರಾಗಸುಧಾ ಥೀಮ್ ಸಾಂಗ್!

masthmagaa.com:

ಡಾಲಿ ಧನಂಜಯ್, ರಚಿತಾ ರಾಮ್ ನಟಿಸಿರುವ, ಅನೂಪ್ ಸಿಳೀನ್ ಸಂಗೀತ ಸಂಯೋಜನೆಯ ಮಾನ್ಸೂನ್ ರಾಗ ಸಿನಿಮಾದ ರಾಗ ಸುಧಾ ಹಾಡು ಯೂಟ್ಯೂಬ್ ನಲ್ಲಿ 10 ಲಕ್ಷ ವೀಕ್ಷಣೆ ಕಂಡು ಮುನ್ನುಗ್ಗುತ್ತಿದೆ. ಹಾಡಲ್ಲಿ ಬೈರಾಗಿ ಖ್ಯಾತಿ ಯಶಾ ಹಾಕಿರೋ ಕಾಣಿಸಿಕೊಂಡಿರೋ ರೀತಿ, ಕುಣಿದಿರೋ ರೇಂಜ್ ವಿಡಿಯೋನ ಮತ್ತೆ ಮತ್ತೆ ನೋಡುವಂತೆ ಮಾಡಿದ್ದು, ಇಂದಿಗೆ ಈ ವಿಡಿಯೋ ಒಂದು ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಈ ಹಾಡಿಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದ್ದು, ರೀಲ್ಸ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಜತೆಗೆ ಈ ಹಾಡಿನ ಕವರ್ ವರ್ಶನ್ಸ್ ಬರ್ತಿದ್ದು, ಹಾಡಿನಷ್ಟೇ ಕವರ್ ವರ್ಶನ್ಸ್ ಕೂಡ‌ ಸದ್ದು ಮಾಡ್ತಿವೆ.

ವಿಖ್ಯಾತ್ ಚಿತ್ರ ನಿರ್ಮಾಣ , ಪುಪ್ಪಕ ವಿಮಾನ ರವೀಂದ್ರನಾಥ್ ನಿರ್ದೇಶನ, ಡಾಲಿ ಧನಂಜಯ, ರಚಿತಾ ರಾಮ್ ಮುಖ್ಯಭೂಮಿಕೆಯ ಈ ಚಿತ್ರ ಈಗಾಗ್ಲೇ ಟೀಸರ್ ನಿಂದಲೇ ಕುತೂಹಲ ಹುಟ್ಟಿಸಿತ್ತು. ಅದಾಗ್ಲೇ ಆಗಸ್ಟ್‌17ಕ್ಕೆ ಬರೋದಕ್ಕೆ ಸಜ್ಜಾಗಿರೋ ಮಾನ್ಸೂನ್ ರಾಗ ಟೀಮ್ ರಾಜ್ಯದಾದ್ಯಂತ ಸುಮಾರು 100ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಕಟೌಟ್ಸ್ ಹಾಕಿ ವಿನೂತನ ಪ್ರಚಾರಕ್ಕೆ ನಾಂದಿ ಹಾಡಿದೆ.

ಒಟ್ಟಾರೆ ಹತ್ತು ಹಲವು ವಿಶೇಷತೆಗಳಿರೋ ಮಾನ್ಸೂನ್ ರಾಗ ದೊಡ್ಡದಾಗಿ ಸೌಂಡ್ ಮಾಡ್ತಿದ್ದು, ನಿರೀಕ್ಷೆಯನ್ನ ಹೆಚ್ಚಿಸ್ತಿದೆ. ಹಾಡನ್ನು ವೀಕ್ಷಿಸಲು ಬಯಸುವವರು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

 

-masthmagaa.com

 

 

Contact Us for Advertisement

Leave a Reply