ರಫೇಲ್ ಗೆ ಆಯುಧ ಪೂಜೆ ಮಾಡಿದ್ದು ತಪ್ಪಲ್ಲ ಎಂದ ಪಾಕ್ ಸೇನಾ ಮುಖ್ಯಸ್ಥ

ರಕ್ಷಣಾ ಸಚಿವ ರಾಜನಾಥ ಸಿಂಗ್ ರಫೇಲ್‍ಗೆ ಆಯುಧ ಪೂಜೆ ಮಾಡಿದ್ದಕ್ಕೆ ನಿನ್ನೆ ಪಾಕಿಸ್ತಾನ ಮಂತ್ರಿ ಚೌಧರಿ ಹುಸೇನ್ ವ್ಯಂಗ್ಯವಾಡಿದ್ದರು. ಆದ್ರೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸಿಫ್ ಗಫೂರ್ ಆಯುಧ ಪೂಜೆಯನ್ನು ಬೆಂಬಲಿಸಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ, ಧರ್ಮಕ್ಕೆ ಅನುಗುಣವಾಗಿದೆ ಎಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಆಸಿಫ್ ಗಫೂರ್, ರಫೇಲ್‍ಗೆ ಪೂಜೆ ಮಾಡಿದ್ದರಲ್ಲಿ ಏನೂ ತಪ್ಪಿಲ್ಲ. ಅದು ಧರ್ಮಕ್ಕೆ ಅನುಸಾರವಾಗಿದೆ. ದಯವಿಟ್ಟು ನೆನಪಿನಲ್ಲಿಡಿ, ಅದು ಕೇವಲ ಮಶೀನ್ ಅಲ್ಲ. ಅದನ್ನು ಓಡಿಸೋ ವ್ಯಕ್ತಿಯ ಸಾಮಥ್ರ್ಯ, ಸಂಕಲ್ಪ ಕೂಡ ಮುಖ್ಯವಾಗಿದೆ. ನಮಗೆ ನಮ್ಮ ವಾಯುಸೇನೆಯ ಹುತಾತ್ಮರ ಬಗ್ಗೆ ಗೌರವ ಇದೆ ಎಂದಿದ್ದಾರೆ.

ದಸರಾ ದಿನದಂದು ಫ್ರಾನ್ಸ್‍ಗೆ ತೆರಳಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಫೇಲ್ ಯುದ್ಧ ವಿಮಾನವನ್ನು ಸಾಂಕೇತಿಕವಾಗಿ ಸ್ವೀಕರಿಸಿದ್ರು. ಈ ವೇಳೆ ಆಯುಧ ಪೂಜೆ ನೆರವೇರಿಸಿದ್ರು. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಪಾಕ್ ಸಚಿವ ಫವಾದ್ ಹುಸೇನ್ ಕೂಡ ವ್ಯಂಗ್ಯಭರಿತ ಚಿತ್ರ ಟ್ವೀಟ್ ಮಾಡಿದ್ದರು.

Contact Us for Advertisement

Leave a Reply