ಕಾಂಗ್ರೆಸ್ ಅಧಿಕಾರದಲ್ಲಿರುವ ಪಂಜಾಬ್​ನಲ್ಲಿ ರೇಪ್​: ರಾಹುಲ್ ಗಾಂಧಿ ಹೇಳಿದ್ದೇನು?

masthmagaa.com:

ಉತ್ತರಪ್ರದೇಶದ ಹತ್ರಾಸ್​ ಗ್ಯಾಂಗ್​ರೇಪ್ ಮತ್ತು ಕೊಲೆ ಪ್ರಕರಣ ನಡೆದ ಬೆನ್ನಲ್ಲೇ ಅಂತಹದ್ದೇ ಪ್ರಕರಣವೀಗ ಪಂಜಾಬ್​ನ ಹೋಶಿಯಾರ್​ಪುರ್​ನಲ್ಲಿ ನಡೆದಿದೆ. 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಸುಟ್ಟು ಹಾಕಲಾಗಿದೆ. ಇದೇ ವಿಚಾರವೀಗ ಬಿಜೆಪಿ ಮತ್ತು ಕಾಂಗ್ರೆಸ್​ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಬಿಜೆಪಿ ಅಧಿಕಾರದಲ್ಲಿರುವ ಉತ್ತರಪ್ರದೇಶದಲ್ಲಿ ಅತ್ಯಾಚಾರ ನಡೆದಾಗ ಅಲ್ಲಿಗೆ ಹೋಗಿದ್ದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ತಮ್ಮದೇ ಪಕ್ಷ ಅಧಿಕಾರದಲ್ಲಿರುವ ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಅತ್ಯಾಚಾರ ನಡೆದಾಗ ಅಲ್ಲಿಗೆ ಯಾಕೆ ಹೋಗುತ್ತಿಲ್ಲ, ಯಾಕೆ ಮಾತನಾಡುತ್ತಿಲ್ಲ ಅಂತ ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್ ಮತ್ತು ನಿರ್ಮಲಾ ಸೀತಾರಾಮನ್ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಇದಕ್ಕೆ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ‘ಉತ್ತರಪ್ರದೇಶ ಸರ್ಕಾರದಂತೆ ಪಂಜಾಬ್ ಮತ್ತು ರಾಜಸ್ಥಾನ ಸರ್ಕಾರಗಳು ಬಾಲಕಿ ಮೇಲೆ ಅತ್ಯಾಚಾರ ನಡೆದೇ ಇಲ್ಲ ಅಂತ ಹೇಳಿಲ್ಲ. ಬಾಲಕಿಯ ಕುಟುಂಬಸ್ಥರಿಗೆ ಬೆದರಿಸಿಲ್ಲ. ಅಲ್ಲದೆ ನ್ಯಾಯಕ್ಕೆ ಅಡ್ಡಿಪಡಿಸಿಲ್ಲ. ಒಂದ್ವೇಳೆ ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಹಾಗೇನಾದ್ರೂ ಮಾಡಿದ್ರೆ ಅಲ್ಲೂ ಕೂಡ ನ್ಯಾಯಕ್ಕಾಗಿ ಹೋರಾಟ ಮಾಡಲು ಹೋಗುತ್ತಿದ್ದೆ’ ಅಂತ ಟ್ವೀಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply