15 ಲಕ್ಷ ಬಂತಾ..? 6 ಸಾವಿರ ಬಂತಾ..? ಮೋದಿದು ಬರೀ ಸುಳ್ಳು: ರಾಹುಲ್ ಗುಡುಗು

ಮಹಾರಾಷ್ಟ್ರ: ಪ್ರಧಾನಿ ನರೇಂದ್ರ ಮೋದಿ ಹೋದಲ್ಲೆಲ್ಲಾ ಸುಳ್ಳು ಹೇಳಿಕೊಂಡು ಓಡಾಡ್ತಾರೆ ಅಂತ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಮಹಾರಾಷ್ಟ್ರದ ಯವತಮಾಲ್​ನಲ್ಲಿ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಬಡವರ ಖಾತೆಗೆ 15 ಲಕ್ಷ ಮತ್ತು ರೈತರ ಖಾತೆಗೆ ಹಣ ಹಾಕೋ ಬಗ್ಗೆ ಬಿಜೆಪಿ ನೀಡಿದ್ದ ಭರವಸೆ ಕುರಿತು ಪ್ರಶ್ನಿಸಿದ್ರು. ಲೋಕಸಭೆ ಚುನಾವಣೆ ವೇಳೆ ಪ್ರತಿಯೊಬ್ಬ ಬಡವರ ಖಾತೆಗೆ 6 ಸಾವಿರ ರೂಪಾಯಿ ಹಾಕುತ್ತೇವೆ ಎಂದು ಮೋದಿ ಹೇಳಿದ್ದರು. ಅದಕ್ಕೂ ಹಿಂದಿನ ಚುನಾವಣೆಯಲ್ಲಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಾಕೋದಾಗಿ ಹೇಳಿದ್ದರು. ಯಾರಿಗಾದ್ರೂ ಹಣ ಸಿಕ್ಕಿತಾ..? ಪ್ರಧಾನಿ ಮೋದಿ ಎಲ್ಲಿಗೆ ಹೋದ್ರೂ ಬರೀ ಸುಳ್ಳು ಹೇಳಿಕೊಂಡು ಓಡಾಡ್ತಿದ್ದಾರೆ ಅಂದ್ರು.

2014ರಲ್ಲಿ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ನಾಯಕರು ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ವಾಪಸ್ ತರುತ್ತೇವೆ. ಅಲ್ಲಿ ಎಷ್ಟು ದುಡ್ಡು ಇದೆ ಅಂದ್ರೆ ಅದರಿಂದ ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂಪಾಯಿ ಹಾಕಬಹುದು ಎಂದಿದ್ದರು. ಅಲ್ಲದೆ ಕಳೆದ 2019ರ ಚುನಾವಣೆಯಲ್ಲಿ ರೈತರ ಖಾತೆಗೆ 6 ಸಾವಿರ ರೂಪಾಯಿ ಹಾಕೋದಾಗಿಯೂ ಹೇಳಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಾಂಗ್ರೆಸ್ ನಿರಂತರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದೆ.

Contact Us for Advertisement

Leave a Reply