masthmagaa.com:
ವಂದೇ ಭಾರತ್ ಸ್ಲೀಪರ್ ಕೋಚ್ ಮತ್ತು ವಂದೇ ಮೆಟ್ರೋ ರೈಲು ಮುಂದಿನ ವರ್ಷ ಲಾಂಚ್ ಆಗಲಿದೆ ಅಂತ ತಿಳಿದು ಬಂದಿದೆ. 2024ರ ಮಾರ್ಚ್ ಒಳಗಡೆ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ವಂದೇ ಭಾರತ್ ಸ್ಲೀಪರ್ ಕೋಚ್ ರೈಲನ್ನು ಬಿಡುಗಡೆ ಮಾಡಲಿದೆ. ಮೊದಲ ರೈಲಿನ ನಿರ್ಮಾಣ ಕಾರ್ಯ ಈಗಾಗಲೇ ಆರಂಭಗೊಂಡಿದೆ ಅಂತ ICF ಜನರಲ್ ಮ್ಯಾನೇಜರ್ ಬಿಜಿ ಮಲ್ಯ ತಿಳಿಸಿದ್ದಾರೆ. ಇನ್ನು ಸ್ಲೀಪರ್ ಕೋಚ್ ಜೊತೆಗೆ ಕಡಿಮೆ ದರ ಇರುವ ವಂದೇ ಮೆಟ್ರೋ ರೈಲನ್ನು ಐಸಿಎಫ್ ನಿರ್ಮಾಣ ಮಾಡುತ್ತಿದೆ. ಈ ವಂದೇ ಮೆಟ್ರೋ ರೈಲಿನಲ್ಲಿ 12 ಬೋಗಿಗಳು ಇರಲಿದ್ದು, ಕಡಿಮೆ ದೂರದ ನಗರಗಳನ್ನು ಸಂಪರ್ಕಿಸಲಿದೆ. ಜನವರಿ 2024ರ ಒಳಗಡೆ ವಂದೇ ಮೆಟ್ರೋ ಬಿಡುಗಡೆಯಾಗುವ ನಿರೀಕ್ಷೆಯಿದೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement