ರಾಜ್ಯದಲ್ಲಿ ಮುಂದುವರೆದ ವರುಣನ ಅಬ್ಬರ: ಕರಾವಳಿ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ!

masthmagaa.com

ರಾಜ್ಯದಲ್ಲಿ ಸುರೀತಿರೋ ಯಮಸ್ವರೂಪಿ ಮಳೆಗೆ ಜನ ಸಂಪೂರ್ಣ ಹೈರಾಣಾಗಿದ್ದಾರೆ. ಅದರಲ್ಲೂ ಕರಾವಳಿ ಮಲೆನಾಡು ಜಿಲ್ಲೆಗಳಲ್ಲಿ ಮಳೆಯ ಅವಾಂತರ ಜಾಸ್ತಿನೇ ಇದ್ದು ಜನ ಆತಂಕದಲ್ಲಿ ಬದಕೋ ರೀತಿ ಆಗಿದೆ. ಮನೆಗಳು ನೆಲಸಮವಾಗಿವೆ. ರಸ್ತೆ ಕೊಚ್ಚಿಹೋಗಿದೆ. ಕೃಷಿ ಭೂಮಿ ಹಾಳಾಗಿ ಬೆಳೆಯನ್ನೆಲ್ಲಾ ಮಳೆರಾಯನ ಆಕ್ರೋಶಕ್ಕೆ ಕೊಚ್ಚಿಹೋಗಿದೆ. ನದಿಗಳೆಲ್ಲಾ ಅಪಾಯದ ಮಟ್ಟ ಮೀರಿ ಹರೀತಿದ್ದು ನದಿ ಪಾತ್ರದ ಜನರಿಗೆ ಆತಂತ ಎದುರಾಗಿದೆ. ಜಲಾಶಯಗಳೆಲ್ಲಾ ಆಲ್‌ ಮೋಸ್ಟ್‌ ಭರ್ತಿಯಾಗೋ ಸ್ಟೇಜ್‌ ಅಲ್ಲಿ ಇವೆ. ಕೆಲವು ಈಗಾಗಲೇ ತುಂಬಿದ್ದು ಹೆಚ್ಚುವರಿ ನೀರನ್ನ ಕೂಡ ನದಿಗೆ ಬಿಡಲಾಗ್ತಿದೆ. ಈ ನಡುವೆ ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ ರಾಜ್ಯದಲ್ಲಿ ಇನ್ನೂ 5 ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇತ್ತ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಅಧಿಕಾರಿಗಳಿಗೆ ಕಟ್ಟೆಚ್ಚರ ವಹಿಸವಂತೆ ಸೂಚಿಸಿದ್ದು ಅದಕ್ಕೆ ಅನುಗುಣವಾಗಿ ಕಾರ್ಯಚರಣೆ ಮಾಡಲಾಗುತ್ತಿದೆ ಅಂತ ಹೇಳಿದ್ದಾರೆ). ರಾಜ್ಯದ ಹಲವು ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಣೆ ಮಾಡಲಾಗಿದೆ.ಇನ್ನು ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ತುಂಬೆಲ್ಲಾ ಮಳೆ ನೀರು ನಿಂತು ಜಲಾವೃತವಾಗಿದೆ. ಬೆಳಗಾವಿ ಹಾಗೂ ಉತ್ತರ ಕನ್ನಡ ಹೆದ್ದಾರಿಯಲ್ಲಿ ಗುಡ್ಡ ಕುಸಿಯುವ ಭೀತಿಯಿದ್ದು ಸಂಜೆ 7 ರಿಂದ ಬೆಳಿಗ್ಗೆ7 ರವರೆಗೂ ವಾಹನ ಸಂಚಾರ ನಿಷೇಧಿಸಲಾಗಿದೆ.ಕಳೆದ 24 ಗಂಟೆಯಲ್ಲಿ ಉಡುಪಿ ಜಿಲ್ಲೆಯ
ಕಾರ್ಕಳ ತಾಲೂಕಿನ ಕುಚ್ಚೂರು ಎಂಬಲ್ಲಿ ಅತಿಹೆಚ್ಚು 228.5 ಮಿಲಿಮೀಟರ್ ಮಳೆಯಾಗಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ, ಮಲೆನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳ ಬಹುತೇಕ ಕಡೆ ಅಧಿಕ ಮಳೆಯಾಗುವ ಸಾದ್ಯತೆ ಇದೆ. ದಕ್ಷಿಣ ಒಳನಾಡು ಜಿಲ್ಲೆಗಳ ಕೆಲವೊಂದು ಕಡೆ ಅಧಿಕ ಮಳೆ ಇನ್ನುಳಿದ ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಅಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ. ಇನ್ನು ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಜಾರಿ ಮಾಡಿದೆ.
ಶಿವಮೊಗ್ಗ ಚಿಕ್ಕಮಗಳೂರು ಕೊಡಗು ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಇನ್ನುಳಿದಂತೆ ಬೀದರ್‌ ಕಲಬುರಗಿ,ಯಾದಗಿರಿ ವಿಜಯಪುರ,ಬೆಳಗಾವಿ ಧಾರವಾಡ,ಹಾವೇರಿ, ಹಾಸನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಹೇಳಿದೆ.ಇತ್ತ ಮಹಾರಾಷ್ಟ್ರದಲ್ಲಿ ಸುರೀತಿರೋ ಭಾರಿ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಗಂಟೆಗೆ 40-50 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು IMD ಮುನ್ಸೂಚನೆ ನೀಡಿದೆ. ಹೀಗಾಗಿ ಮುಂದಿನ 24 ಗಂಟೆಗಳವರೆಗೆ ಮುಂಬೈನಲ್ಲೂ ಕೂಡ ರೆಡ್ ಅಲರ್ಟ್ ಘೋಷಿಸಿದೆ.

 

masthmagaa.com

Contact Us for Advertisement

Leave a Reply