ಮೋಸ್ಟ್‌ ವಾಂಟೆಡ್‌ ಝಾಕಿರ್‌ ನಾಯ್ಕ್‌ನನ್ನು ಭಾರತಕ್ಕೆ ಹಸ್ತಾಂತರ ಮಾಡುವಂತೆ ಮಲೇಷ್ಯಾ ಬಳಿ ಪ್ರಸ್ತಾಪ!

masthmagaa.com:

ಹಲವು ಪ್ರಕರಣಗಳಲ್ಲಿ ಮೋಸ್ಟ್‌ ವಾಂಟೆಡ್‌ ಆಗಿರೋ ಝಾಕಿರ್‌ ನಾಯ್ಕ್‌ ಭಾರತದ ಕಾನೂನಿನ ಅಡಿಯಲ್ಲಿ ಆರೋಪಿಯಾಗಿದ್ದಾನೆ. ಝಾಕಿರ್‌ನನ್ನ ಭಾರತಕ್ಕೆ ಹಸ್ತಾಂತರ ಮಾಡಿ ಅಂತ ಮಲೇಷ್ಯಾ ಬಳಿ ಪ್ರಸ್ತಾಪ ಮಾಡಿದ್ದೇವೆ ಅಂತ ವಿದೇಶಾಂಗ ಸಚಿವಾಲಯದ ವಕ್ತಾರ ಆರಿಂಧಮ್‌ ಭಗ್ಚಿ ಹೇಳಿದ್ದಾರೆ. ಅಂದ್ಹಾಗೆ ಅಕ್ರಮ ಹಣ ವರ್ಗಾವಣೆ ಮತ್ತು ದ್ವೇಷ ಭಾಷಣ ಪ್ರಕರಣಗಳ ತನಿಖೆ ನಡೆಯುವಾಗ್ಲೆ 2016ರಲ್ಲಿ ಝಾಕಿರ್‌ ಮಲೇಷ್ಯಾಗೆ ಪರಾರಿಯಾಗಿದ್ದ. ಹೀಗಾಗಿ ಅವರನ್ನ ನಮಗೆ ಹಸ್ತಾಂತರ ಮಾಡಿ ಅಂತ ಮಲೇಷ್ಯಾ ಬಳಿ ಭಾರತ ಪ್ರಸ್ತಾಪ ಇಟ್ಟಿದೆ. ಇನ್ನು ಕತಾರ್‌ನಲ್ಲಿ ನಡಿತಿರೋ ಫಿಫಾ ವಿಶ್ವಕಪ್‌ಗೆ ಅಲ್ಲಿನ ಸರ್ಕಾರ ಆಹ್ವಾನ ನೀಡಿದೆ. ಧಾರ್ಮಿಕ ದ್ವೇಷವನ್ನ ಬಿತ್ತಲಾಗ್ತಿದೆ ಅಂತ ಭಾರತ ಆರೋಪಿಸಿತ್ತು. ನಂತರ ಝಾಕಿರ್‌ಗೆ ಅಧಿಕೃತ ಆಹ್ವಾನ ನೀಡಿಲ್ಲ ಅಂತ ಕತಾರ್‌ ಸರ್ಕಾರ ಸ್ಪಷ್ಟನೆ ಕೂಡ ನೀಡಿತ್ತು.

-masthmagaa.com

Contact Us for Advertisement

Leave a Reply