ನ್ಯಾಯಾಂಗದಲ್ಲಿ ಹಸ್ತಕ್ಷೇಪ ಸರಿಯಲ್ಲ: `ಸುಪ್ರೀಂ’ ಸಿಜೆ ಕೆಂಡ

ನ್ಯಾಯಾಂಗದ ನೇಮಕಾತಿ ಮತ್ತು ವರ್ಗಾವಣೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪವನ್ನು ಸುಪ್ರೀಂಕೋರ್ಟ್ ಖಂಡಿಸಿದೆ. ಹೈಕೋರ್ಟ್ ನ್ಯಾ.ಎ.ಎ ಖುರೇಷಿ ಅವರ ನೇಮಕ ವಿರೋಧಿಸಿ ಗುಜರಾತ್ ವಕೀಲರ ಸಂಘ ಅರ್ಜಿ ಸಲ್ಲಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಸಿಜೆಐ ರಂಜನ್ ಗೊಗೊಯ್, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯಾಯಾಂಗದ ನೇಮಕ ಮತ್ತು ಇತರೆ ವಿಚಾರಗಳು ನ್ಯಾಯ ವ್ಯವಸ್ಥೆಯ ಆಡಳಿತಕ್ಕೆ ಸೇರಿದ್ದು, ಈ ಬಗ್ಗೆ ಪರಾಮರ್ಶೆ ಮಾಡಬಾರದು ಎಂದು ಕಿಡಿಕಾರಿದ್ರು. ಅಲ್ಲದೆ ಇದು ಕೋರ್ಟ್ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಅಂತ ಹೇಳಿದ್ರು.

ನ್ಯಾ.ಖುರೇಷಿ ಅವರನ್ನು ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿ ವರ್ಗಾಯಿಸುವ ಶಿಫಾರಸಿಗೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಾಗಿ ಸುಪ್ರೀಂಕೋರ್ಟ್‍ನ ಕೊಲಿಜಿಯಂ ಶಿಫಾರಸನ್ನು ಬದಲಿಸಿ ಅವರನ್ನು ತ್ರಿಪುರಾಗೆ ವರ್ಗಾಯಿಸಲು ಸೂಚಿಸಿತ್ತು. ಈ ನಡೆ ತೀವ್ರ ಟೀಕೆಗೆ ಒಳಗಾಗಿತ್ತು. ಮದ್ರಾಸ್ ಹೈಕೋರ್ಟ್ ಜಡ್ಜ್ ವಿ.ಕೆ.ತಹಿಲ್ರಮಣಿಯವರನ್ನು ಮೇಘಾಲಯ ಹೈಕೋರ್ಟ್‍ಗೆ ವರ್ಗಾಯಿಸಿದ್ದರಿಂದ ಅವರು ರಾಜೀನಾಮೆ ನೀಡಿದ್ದರು. ಹೀಗಾಗಿ ತಹಿಲ್ರಮಣಿ ವರ್ಗಾವಣೆಯನ್ನು ಹೈಕೋರ್ಟ್ ವಕೀಲರ ಸಂಘ ಟೀಕಿಸಿತ್ತು. ಹೀಗಾಗಿಯೇ ಎಲ್ಲರ ನಡೆಗೆ ಸುಪ್ರೀಂಕೋರ್ಟ್ ಸಿಜೆಐ ರಂಜನ್ ಗೊಗೊಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Contact Us for Advertisement

Leave a Reply