ನಾಳೆ, ನಾಡಿದ್ದು ನನ್ನ ಮೇಲೆ ಐಟಿ ದಾಳಿ ನಡೆಯಬಹುದು: ರಾಜಣ್ಣ

ತುಮಕೂರು: ನನ್ನ ಮೇಲೆ ಐಟಿ ದಾಳಿ ನಡೆದರೆ ಅದಕ್ಕೆ ಮಾಜಿ ಪ್ರಧಾನಿ ದೇವೇಗೌಡರೇ ಕಾರಣ ಅಂತ ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಪರಮೇಶ್ವರ್ ಸಾಮ್ರಾಜ್ಯದ ಮೇಲೆ ನಡೆದ ಐಟಿ ದಾಳಿ ಬಗ್ಗೆ ಮಾತನಾಡಿದ ಅವರು, ನನ್ನ ಮೇಲೆ ಐಟಿ ದಾಳಿಯಾದರೆ ಅದಕ್ಕೆ ದೇವೇಗೌಡರೇ ಕಾರಣ. ಯಾಕಂದ್ರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದಾರೆ.  ಹೀಗಾಗಿ ನನ್ನ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಪತ್ರ ಬರೆಯುತ್ತಾರೆ. ಹೇಗೂ ಮನೆಯಲ್ಲಿ ಏನೂ ಕೆಲಸ ಇರೋದಿಲ್ಲ ಅಲ್ವಾ. ಹೀಗಾಗಿ ಪತ್ರ ಬರೆದು ದೂರುತ್ತಾರೆ ಎಂದು ಆರೋಪಿಸಿದ್ದಾರೆ. ಆದ್ರೆ ಯಾರು ಏನೇ ಮಾಡಿದ್ರೂ ನಾನೇನು ಹೆದರೋದಿಲ್ಲ. ನನ್ನ ಮೇಲೆ ಐಟಿ ದಾಳಿಯಾದಲ್ಲಿ ನಾನೂ ಪತ್ರ ಬರೆದು ದೇವೇಗೌಡರ ಕುಟುಂಬದ ಆಸ್ತಿ ಬಗ್ಗೆ ತನಿಖೆಗೆ ಮನವಿ ಮಾಡುತ್ತೇನೆ ಎಂದಿದ್ದಾರೆ. ಅಲ್ಲದೆ ನನ್ನ ಮೇಲೆ ನಾಳೆ ಅಥವಾ ನಾಡಿದ್ದು ಐಟಿ ದಾಳಿ ನಡೆಯಬಹುದು ಎಂದು ಭವಿಷ್ಯ ಕೂಡ ನುಡಿದಿದ್ದಾರೆ.

 

Contact Us for Advertisement

Leave a Reply