ನರ್ಸ್‌ಗಳ ʻಡಾಕ್ಟರ್ʼ ಟೈಟಲ್‌ ಮನವಿ! ತಿರಸ್ಕರಿಸಿದ ರಾಜಸ್ಥಾನ ಸರ್ಕಾರ !

masthmagaa.com:

ಪಿಎಚ್‌ಡಿ ಮಾಡಿರೋ ನರ್ಸ್‌ಗಳು ʻಡಾಕ್ಟರ್ʼ ಟೈಟಲ್‌ ಕೋರಿ ಮಾಡಿರೋ ಮನವಿಯನ್ನ ಇದೀಗ ರಾಜಸ್ಥಾನ ಸರ್ಕಾರ ನಿರಾಕರಿಸಿದೆ. ನರ್ಸಿಂಗ್‌ನಲ್ಲಿ ಪಿಎಚ್‌ಡಿ ಮುಗಿಸಿ, ʻಡಾಕ್ಟರ್‌ʼ ಟೈಟಲ್‌ಗಾಗಿ ರಾಜಸ್ಥಾನ ಸರ್ಕಾರಕ್ಕೆ ಮೂವರು ನರ್ಸ್‌ಗಳು ಮನವಿ ಮಾಡ್ಕೊಂಡಿದ್ರು. ಆದ್ರೆ ರಾಜಸ್ಥಾನದ ಆರೋಗ್ಯ ಸಚಿವಾಲಯ ಇವ್ರ ಮನವಿಯನ್ನ ರಿಜೆಕ್ಟ್‌ ಮಾಡಿದೆ. ನರ್ಸಿಂಗ್‌ನಲ್ಲಿ ಪಿಎಚ್‌ಡಿ ಮಾಡಿದ್ರೂ ನಿಮಗೆ ಈ ಟೈಟಲ್‌ ಕೊಡೋಕೆ ಆಗಲ್ಲ ಅಂದಿದ್ದಾರೆ. ಅಂದ್ಹಾಗೆ ಹೆಲ್ತ್‌ ಸೆಕ್ಟರ್‌ನಲ್ಲಿ ಈ ಟೈಟಲ್‌ ನೀಡ್ಬೇಕಾದ್ರೆ ಸ್ವಲ್ಪ ಯೋಚಿಸ್ಬೇಕಾಗುತ್ತೆ. ಯಾಕಂದ್ರೆ, ಈ ಸೆಕ್ಟರ್‌ನಲ್ಲಿ ವೈದ್ಯರಿಗೆ ʻಡಾಕ್ಟರ್ʼ ಟೈಟಲ್‌ ನೀಡಲಾಗುತ್ತೆ. ಸೋ, ಹೀಗಿರುವಾಗ ಪಿಎಚ್‌ಡಿ ಮಾಡಿದ ನರ್ಸ್‌ಗಳಿಗೂ ಈ ಟೈಟಲ್‌ ನೀಡಿದ್ರೆ ಗೊಂದಲಗಳು.. ತೊಂದರೆಗಳಾಗೋ ಚಾನ್ಸಸ್‌ ಇದೆ ಅಂತ ಈ ಟೈಟಲ್‌ ಕೊಡಲ್ಲ. ಇದೀಗ ರಾಜಸ್ಥಾನ ಸರ್ಕಾರ ಕೂಡ ಇದನ್ನೇ ಹೇಳಿದೆ.

-masthmagaa.com

Contact Us for Advertisement

Leave a Reply