ರಾಜೀವ್‌ ಗಾಂಧಿ ಹಂತಕನ ಬಿಡುಗಡೆ! ಏನ್‌ ಹೇಳ್ತು ಕೋರ್ಟ್‌?

masthmagaa.com:

ಭಾರತದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹಂತಕ ಪೆರರಿವಾಳನ್‌ ಅವ್ರನ್ನ ಬಿಡುಗಡೆ ಮಾಡಿ ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. ಇದ್ರಿಂದ ನಳಿನಿ ‍ಶ್ರೀಹರನ್‌ ಸೇರಿದಂತೆ ಉಳಿದ ಆರು ಅಪರಾಧಿಗಳ ರಿಲೀಸ್‌ಗೂ ಕೂಡ ದಾರಿ ಮಾಡಿಕೊಟ್ಟಂತಾಗಿದೆ. ಹತ್ಯೆಯ ಸಮಯದಲ್ಲಿ 19 ವರ್ಷದ ಬಾಲಕನಾಗಿದ್ದ ಪೆರರಿವಾಳನ್ 31 ವರ್ಷದಿಂದ ಶಿಕ್ಷೆ ಅನುಭವಿಸ್ತಾ ಇದ್ರು. ರಾಜೀವ್‌ ಹತ್ಯೆಯ ಮಾಸ್ಟರ್‌ಮೈಂಡ್‌ LTTEಯ ಶಿವರಸನ್‌ಗೆ ಎರಡು 9-ವೋಲ್ಟ್‌ ಬ್ಯಾಟರಿಗಳನ್ನ ಖರೀದಿ ಮಾಡಿಕೊಟ್ಟಿದ್ರು. ಆ ಬ್ಯಾಟರಿಗಳನ್ನ ಹತ್ಯೆಗೆ ಉಪಯೋಗಿಸಿದ ಬಾಂಬ್‌ನಲ್ಲಿ ಬಳಸಲಾಗಿತ್ತು ಅನ್ನೊ ಆರೋಪದ ಮೇಲೆ ಅವ್ರನ್ನ ಬಂಧಿಸಲಾಗಿತ್ತು. 1998ರಲ್ಲಿ anti-terrorism court ಪೆರರಿವಾಳನ್‌ಗೆ ಮರಣದಂಡನೆ ವಿಧಿಸಿತ್ತು. ನಂತ್ರ 2014ರಲ್ಲಿ ಅದನ್ನ ಜೀವಾವಧಿ ಶಿಕ್ಷೆಗೆ ಬದ್ಲಾಯಿಸಲಾಗಿತ್ತು. ಇದಾದ ಸ್ವಲ್ಪ ಸಮಯದ ನಂತರ, ಪೆರರಿವಾಳನ್ ಜೈಲಿನಿಂದ ಬೇಗನೆ ಬಿಡುಗಡೆ ಮಾಡೋಕೆ ಕೋರಿ ಮನವಿ ಸಲ್ಲಿಸಿದ್ದರು. ಕ್ಷಮಾಪಣೆ ಅರ್ಜಿ ಬಗ್ಗೆ ರಾಷ್ಟ್ರಪತಿಗಳು ನಿರ್ಧಾರ ಮಾಡೋವರೆಗೂ ನ್ಯಾಯಾಲಯ ಕಾಯ್ಬೇಕು ಅಂತ ಕೇಂದ್ರ ಮನವಿ ಮಾಡಿತ್ತು. ಆದ್ರೆ ತಮಿಳುನಾಡಿನ ರಾಜ್ಯಪಾಲರು 7 ಜನ್ರನ್ನ ರಿಲೀಸ್‌ ಮಾಡ್ಬೇಕು ಅನ್ನೋ ರಾಜ್ಯ ಸಂಪುಟದ ನಿರ್ಧಾರಕ್ಕೆ ಬದ್ಧರಾಗಿರ್ಬೇಕು ಸೆಕ್ಷನ್‌ 161ರ ಅಡಿಯಲ್ಲಿ ಕ್ಷಮಾದಾನ ನೀಡ್ಬೆಕು. ಹಾಗಾಗಿ ರಾಷ್ಟ್ರಪತಿಗಳು ನಿರ್ಧಾರ ತಗೊಳ್ಳೋವರ್ಗು ಕಾಯಕ್ಕಾಗಲ್ಲ ಅಂತ ಸುಪ್ರೀಂ ಕೋರ್ಟ್‌ ಬಿಡುಗಡೆ ಮಾಡೋಕೆ ಸೂಚಿಸಿದೆ. ಅಂದ್ಹಾಗೆ ರಾಜೀವ್‌ ಗಾಂಧಿಯವ್ರು ಮೇ 21, 1991ರಲ್ಲಿ ತಮಿಳುನಾಡಿನ ಶ್ರೀ ಪೆರಂಬದೂರಿನಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗಿಯಾಗಿದ್ರು. ಆ ವೇಳೆ ಧನು ಎಂಬ ಮಹಿಳಾ ಆತ್ಮಾಹುತಿ ಬಾಂಬರ್‌ನಿಂದ ಹತ್ಯೆಗೀಡಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 7 ಜನ್ರನ್ನ ಬಂಧಿಸಲಾಗಿತ್ತು.

-masthmagaa.com

Contact Us for Advertisement

Leave a Reply