ಫ್ರಾನ್ಸ್ ನಲ್ಲಿ ನಾಳೆ ರಾಜನಾಥ್ ಸಿಂಗ್ ರಿಂದ ಆಯುಧ ಪೂಜೆ

ದಸರಾ, ಆಯುಧ ಪೂಜೆ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಫ್ರಾನ್ಸ್‍ನಲ್ಲಿ ರಫೇಲ್ ಯುದ್ಧ ವಿಮಾನಕ್ಕೆ ಪೂಜೆ ಮಾಡಲಿದ್ದಾರೆ. ಅವರು ಗೃಹಸಚಿವರಾಗಿದ್ದಾಗಲೂ ಪ್ರತಿ ವರ್ಷ ಆಯುಧಪೂಜೆ ಮಾಡುತ್ತಿದ್ದರು. ಕಳೆದ ವರ್ಷ ಬಿಕಾನೇರ್‍ನಲ್ಲಿ ಬಿಎಸ್‍ಎಫ್ ಯೋಧರೊಂದಿಗೆ ಶಸ್ತ್ರಪೂಜೆ ಮಾಡಿದ್ದರು.

ಅಕ್ಟೋಬರ್ 8ರಂದು ಫ್ರಾನ್ಸ್ ನಲ್ಲಿ ಆಯುಧ ಪೂಜೆ ಮಾಡಲಿರುವ ರಾಜನಾಥ್ ಸಿಂಗ್, ದೇಶದ ಮೊದಲ ಫೈಟರ್ ಜೆಟ್‍ನಲ್ಲಿ ಹಾರಾಟ ನಡೆಸಲಿದ್ದಾರೆ. ನಂತರ ಅದೇ ದಿನ ಬೋರ್ಡ್ ಆಫೀಸ್ ಮೆರಿನೈಕ್‍ನಲ್ಲಿ ರಫೇಲ್ ಸ್ವೀಕರಿಸಲಿದ್ದಾರೆ. ಅಕ್ಟೋಬರ್ 9ರಂದು ವಾಯುಸೇನೆಯ ಪ್ರಮುಖ ಅಧಿಕಾರಿಗಳೊಂದಿಗೆ ಪ್ಯಾರಿಸ್‍ಗೆ ತೆರಳಲಿದ್ದಾರೆ. ರಫೇಲ್ ಭಾರತದ ಅಗತ್ಯಕ್ಕೆ ತಕ್ಕಂತೆ ಬದಲಿಸಲಾಗಿದೆ.

ರಫೇಲ್ ವಿಮಾನ ಹಾರಿಸಲು ಭಾರತದ ವಾಯುಸೇನೆಯ ಕೆಲ ಪೈಲಟ್‍ಗಳಿಗೆ ತರಬೇತಿ ನೀಡಲಾಗಿದೆ. ಅಲ್ಲದೆ ವಾಯುಸೇನೆಯ 24ಕ್ಕೂ ಹೆಚ್ಚು ಪೈಲಟ್‍ಗಳನ್ನು 3ಕ್ಕೂ ಹೆಚ್ಚು ವಿಭಾಗಗಳಾಗಿ ಮಾಡಿ ಟ್ರೈನಿಂಗ್ ನೀಡಲಾಗುತ್ತೆ. 2020ರ ವೇಳೆ ಇವರ ಟ್ರೈನಿಂಗ್ ಪೂರ್ಣಗೊಳ್ಳಲಿದೆ.

Contact Us for Advertisement

Leave a Reply