ಸುಪ್ರೀಂಕೋರ್ಟ್​​​ನಲ್ಲಿ ಕೊನೆ ದಿನದ ಅಯೋಧ್ಯೆ ವಿಚಾರಣೆ.. ತೀರ್ಪು ಯಾವಾಗ ಗೊತ್ತಾ..?

ದೆಹಲಿ: ಸುಪ್ರೀಂಕೋರ್ಟ್​​​ನಲ್ಲಿಂದು ಅಯೋಧ್ಯೆ ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿ ವಿವಾದ ಸಂಬಂಧ ಅಂತಿಮ ದಿನದ ವಿಚಾರಣೆ ನಡೆಯಲಿದೆ. ಇಂದು ಹಿಂದೂ ಮತ್ತು ಮುಸ್ಲಿಂ ಪಕ್ಷಗಳು ತಮ್ಮ ಕೊನೆಯ ಹಂತದ ವಾದವನ್ನು ಮಂಡಿಸಲಿವೆ. ಮೊದಲಿಗೆ ಹಿಂದೂಗಳ ಪರ ವಕೀಲರು ವಾದಿಸಲಿದ್ದು, ನಂತರ ಮುಸ್ಲಿಂ ಪರ ವಕೀಲರಿಗೆ ಉತ್ತರ ನೀಡಲು 1 ಗಂಟೆ ಕಾಲಾವಕಾಶ ನೀಡಲಾಗುತ್ತೆ. ನಿನ್ನೆ ಕೂಡ ರಂಜನ್ ಗೊಗೊಯ್ ಇವತ್ತು ವಿಚಾರಣೆ ಮುಗಿಸುವಂತೆ ಹೇಳಿತ್ತು. ಇನ್ನು ಒಂದು ತಿಂಗಳಲ್ಲಿ ತೀರ್ಪು ಕೂಡ ಹೊರಬೀಳುವ ಸಾಧ್ಯತೆ ಇದೆ. ರಂಜನ್ ಗೊಗೊಯ್ ನವೆಂಬರ್ 17ರಂದು ನಿವೃತ್ತಿಯಾಗಲಿದ್ದು, ಅದಕ್ಕೂ ಮುನ್ನ ಈ ತೀರ್ಪು ನೀಡುವ ಸಾಧ್ಯತೆ ಇದೆ.

ಮೊನ್ನೆ ವಾದ ಮಂಡಿಸಿದ್ದ ಮುಸ್ಲಿಂ ಪಕ್ಷ ನಮಗೆ 1992ರಲ್ಲಿ ಅಯೋಧ್ಯೆ ಹೇಗಿತ್ತೋ ಹಾಗೆಯೇ ಬೇಕು ಎಂದು ಹೇಳಿದ್ದರು. ಆದ್ರೆ ನಿನ್ನೆ ಇದಕ್ಕೆ ಉತ್ತರಿಸಿದ್ದ ಹಿಂದೂ ಪಕ್ಷದ ಪರ ವಕೀಲರು, ಅಯೋಧ್ಯೆಯಲ್ಲಿ 56ರಿಂದ 60 ಮಸೀದಿಗಳಿವೆ. ಮುಸ್ಲಿಮರು ಇವುಗಳಲ್ಲಿ ಎಲ್ಲಿ ಬೇಕಾದ್ರೂ ಹೋಗಿ ನಮಾಜ್ ಮಾಡಬಹುದು. ಆದ್ರೆ ಶ್ರೀರಾಮನ ಜನ್ಮಸ್ಥಳವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದಿದ್ದರು.

ಅಯೋಧ್ಯೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಲಾಗಿದೆ.

Contact Us for Advertisement

Leave a Reply