ಯಡಿಯೂರಪ್ಪ ಅವರೇ ನಮ್ಮ ಟೀಂ ಕ್ಯಾಪ್ಟನ್: ರಾಮದಾಸ್

ನನ್ನದು ತಂತಿಯ ಮೇಲಿನ ನಡಿಗೆ ಎಂದ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಶಾಸಕ ಎಸ್.ಎ ರಾಮದಾಸ್ ಪ್ರತಿಕ್ರಿಯಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಸಿಎಂ ಅಂದಮೇಲೆ ಒತ್ತಡ ಇದ್ದೇ ಇರುತ್ತೆ. ಅದೇ ಒತ್ತಡದಲ್ಲಿ ಹಾಗೆ ಹೇಳಿರಬಹುದು. ಯಡಿಯೂರಪ್ಪ ಅವರೇ ನಮ್ಮ ಟೀಂ ಕ್ಯಾಪ್ಟನ್. ಯಡಿಯೂರಪ್ಪ ಯಾವುದಕ್ಕೂ ಚಿಂತಿಸೋ ಅಗತ್ಯವಿಲ್ಲ. ಅವರು ಯಾವುದೇ ನಿರ್ಧಾರ ಕೈಗೊಂಡರೂ ನಾವೆಲ್ಲಾ ಅವರ ಜೊತೆ ಇರುತ್ತೇವೆ. ಆದ್ರೆ ತಂತಿ ಮೇಲಿನ ನಡಿಗೆ ಅಂತ ಯಾವ ಅರ್ಥದಲ್ಲಿ ಹೇಳಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ ಅಂತ ಹೇಳಿದ್ದಾರೆ.

ಅನರ್ಹರಿಗೆ ಬಿಜೆಪಿ ಟಿಕೆಟ್ ಇಲ್ಲ ಎಂದಿದ್ದ ಕತ್ತಿ ಹೇಳಿಕೆಗೆ ಪ್ರತಿಕ್ರಿಯಿಸಿ, ಮನೆಗೆ ಬಂದವರಿಗೆ ಮೊದಲು ಊಟ ಹಾಕಬೇಕು. ನಾವು ಹಸಿದುಕೊಂಡಿದ್ದರೂ ಪರವಾಗಿಲ್ಲ ಎಂದಿದ್ದಾರೆ. ಅದೇ ರೀತಿ ಅರ್ಹತೆ ವಿಚಾರದಲ್ಲಿ ನೋಡೋದಾದ್ರೆ ಹಳೆ ಮೈಸೂರು ಭಾಗದಲ್ಲಿ ಅತ್ಯಂತ ಹಳಬ ನಾನೇ. ಆದ್ರೆ ಈಗ ಹಾಗೆಲ್ಲಾ ನೋಡೋಕ್ಕಾಗಲ್ಲ. ಪರಿಸ್ಥಿತಿ ಹಾಗಿಲ್ಲ ಎಂದು ರಾಮದಾಸ್ ಹೇಳಿದ್ದಾರೆ.

Contact Us for Advertisement

Leave a Reply