BIG BREAKING: ರಮೇಶ್​ ಜಾರಕಿಹೊಳಿ CD ಕೇಸ್​ನಲ್ಲಿ ಯುವತಿ ಸೇರಿ 5 ಜನ ವಶಕ್ಕೆ

masthmagaa.com:

ರಮೇಶ್ ಜಾರಕಿಹೊಳಿ ಖಾಸಗಿ ವಿಡಿಯೋ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ರಚನೆಯಾದ ಮೊದಲ ದಿನವೇ ನಾಲ್ವರು ಯುವಕರು ಮತ್ತು ಓರ್ವ ಯುವತಿಯನ್ನ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ವಿಜಯನಗರದ ಓರ್ವ ಯುವಕ ಮತ್ತು ರಾಮನಗರದಲ್ಲಿ ಕೆಲಸ ಮಾಡುತ್ತಿದ್ದ ಆತನ ಗೆಳತಿ (ಶಿಕ್ಷಕಿ), ಚಾಮರಾಜಪೇಟೆಯ ಓರ್ವ ಯುವಕ, ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನ ಓರ್ವ ಯುವಕ ಸೇರಿದಂತೆ ಒಟ್ಟು 5 ಜನರನ್ನ ವಶಕ್ಕೆ ಪಡೆಯಲಾಗಿದೆ ಅಂತ ವರದಿಯಾಗಿದೆ. ಐವರನ್ನ ಕೂಡ ವಿಚಾರಣೆಗೆ ಒಳಪಡಿಸುವ ಹಿನ್ನೆಲೆ ಬೆಂಗಳೂರಿನ ಸಿಐಡಿ ಕಚೇರಿಗೆ ಬರುವಂತೆ ಸೂಚಿಸಲಾಗಿದೆ. ಚಾಮರಾಜಪೇಟೆಯ ಯುವಕ ಟೆಕ್​ ಎಕ್ಸ್​ಪರ್ಟ್ ಅನ್ನೋದು ಗೊತ್ತಾಗಿದೆ. ಇವರೆಲ್ಲಾ ಯಾರು? ಇವರಿಗೂ ರಮೇಶ್ ಜಾರಕಿಹೊಳಿ ವಿಡಿಯೋಗೂ ಯಾವ ರೀತಿ ಸಂಬಂಧ? ಅನ್ನೋದು ಸೇರಿದಂತೆ ಉಳಿದ ವಿಚಾರ ಇನ್ನಷ್ಟೇ ಗೊತ್ತಾಗಬೇಕಿದೆ.

ಅರೆಸ್ಟ್ ಆದವರಲ್ಲಿ ವಿಡಿಯೋದಲ್ಲಿದ್ದ ಯುವತಿಯ ಬಾಯ್​ಫ್ರೆಂಡ್​ ಕೂಡ ಸೇರಿದ್ದಾನೆ. ಈತನಿಗೆ ಎಲ್ಲವೂ ಗೊತ್ತಿತ್ತು. ಬಾಯ್​ಫ್ರೆಂಡ್​-ಗರ್ಲ್​ ಫ್ರೆಂಡ್​ ಎಲ್ಲರೂ ಸೇರ್ಕೊಂಡ್​ ರಮೇಶ್ ಜಾರಕಿಹೊಳಿಯನ್ನ ಟ್ರಾಪ್ ಮಾಡಿದ್ರು ಅಂತ ಮೂಲಗಳು ಹೇಳಿವೆ. ಕಾಲ್​ ರೆಕಾರ್ಡ್ಸ್ ಮತ್ತು ಹಣಕಾಸಿನ ವಹಿವಾಟು​ ಆಧಾರದಲ್ಲಿ ಇವರನ್ನ ವಶಕ್ಕೆ ಪಡೆಯಲಾಗಿದೆ ಎನ್ನಲಾಗ್ತಿದೆ. ಇನ್ನು ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳು ಆಂಧ್ರಪ್ರದೇಶದಲ್ಲಿ ತಲೆ ಮರೆಸಿಕೊಂಡಿದ್ದಾರಂತೆ. ಐಪಿ ಅಡ್ರೆಸ್​ ಹ್ಯಾಕ್ ಮಾಡಿ ಬೆಂಗಳೂರಿನಲ್ಲೇ ವಿಡಿಯೋ ಅಪ್ಲೋಡ್​ ಮಾಡಿರೋ ಸಾಧ್ಯತೆ ಇದೆ. ವಿಡಿಯೋ ಮೂಲವನ್ನ ಹುಡುಕಿದಾಗ ರಷ್ಯಾದ ಸರ್ವರ್ ಅಂತ ತೋರಿಸ್ತಿತ್ತು ಅಂತ ಹೇಳಲಾಗ್ತಿದೆ. ರಮೇಶ್ ಜಾರಕಿಹೊಳಿ ಈ ಹಿಂದೆ ಮಾತನಾಡುವಾಗ ಕೋಟಿ ಕೋಟಿ ಖರ್ಚು ಮಾಡಿ ಸರ್ವರ್​ಗಳನ್ನ ಬುಕ್ ಮಾಡಿದ್ರು ಅಂತ ಹೇಳಿದ್ದರು.

-masthmagaa.com

Contact Us for Advertisement

Leave a Reply