ಪರಮೇಶ್ವರ್ ಪಿಎ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ..?

ಹಾಯ್ ಫ್ರೆಂಡ್ಸ್…ಬಾಸ್ ಪರಮೇಶ್ವರ್ ಮೇಲೆ ಐಟಿ ದಾಳಿಯಾದರೆ, ಪಿಎ ಆಗಿ ಕೆಲಸ ಮಾಡುತ್ತಿದ್ದ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ? ಮಾಜಿ ಉಪಮುಖ್ಯಮಂತ್ರಿ ಡಾಕ್ಟರ್ ಜಿ ಪರಮೇಶ್ವರ್ ಜೈಲಿಗೆ ಹೋಗುತ್ತಾರಾ? ಬಿಜೆಪಿ ಐಟಿ-ಇಡಿ ಬಳಸಿ ಕಾಂಗ್ರೆಸ್ ನಾಯಕರನ್ನ ಟಾರ್ಗೆಟ್ ಮಾಡುತ್ತಿದೆಯಾ?

ಈ ಪ್ರಶ್ನೆ ಈಗ ಜೋರಾಗಿ ಕೇಳಿ ಬರುತ್ತಿದೆ. ಇದಕ್ಕೆ ಅತ್ಯಂತ ಬಲವಾದ ಕಾರಣವೂ ಇದೆ. ಡಾಕ್ಟರ್ ಜಿ ಪರಮೇಶ್ವರ್ ಅವರಿಗೆ ಜೈಲಿಗೆ ಹೋಗುವ ಭೀತಿ ಕಾಡುತ್ತಿದೆ. ಯಾಕೆ ಅಂತ ನಿಮಗೆ ಹೇಳುತ್ತೇವೆ. ಅದಕ್ಕಿಂತ ಮೊದಲು ಅವರ ಪಿಎ ರಮೇಶ್ ಆತ್ಮಹತ್ಯೆ ಹಿಂದಿನ ರಹಸ್ಯ ಏನು ಅಂತ ಯೋಚನೆ ಮಾಡೋಣ. ಜಸ್ಟ್ ಯೋಚನೆ ಮಾಡಿ ಫ್ರೆಂಡ್ಸ್…, ಐಟಿ ದಾಳಿ ಯಾಗಿದ್ದು ಪರಮೇಶ್ವರ್ ಮತ್ತು ಅವರ ಶಿಕ್ಷಣ ಸಂಸ್ಥೆಯ ಸಾಮ್ರಾಜ್ಯಗಳ ಮೇಲೆ. ಈ ದಾಳಿ ವೇಳೆ ಏನೇ ಅಕ್ರಮಗಳು ಬೆಳಕಿಗೆ ಬಂದಿದ್ದರೂ ಅದರಿಂದ ಕಂಟಕ ಎದುರಾಗುತ್ತಿದ್ದಿದ್ದು ಡಾಕ್ಟರ್ ಜಿ ಪರಮೇಶ್ವರ್ ಅವರಿಗೆ. ಹೀಗಿರುವಾಗ ಕೇವಲ ಒಬ್ಬ ಪಿಎ ಆಗಿ ಕೆಲಸ ಮಾಡುತ್ತಿದ್ದ ರಮೇಶ್ ಅನ್ನೋ ಈ ವ್ಯಕ್ತಿ ಯಾಕೆ ಆತ್ಮಹತ್ಯೆ ಮಾಡಿಕೊಂಡ. ಈ ಪ್ರಶ್ನೆ ಚಿದಂಬರರಹಸ್ಯದಂತೆ ಎಲ್ಲರನ್ನೂ ಕಾಡುತ್ತಿದೆ. ಹಲವು ಅನುಮಾನಗಳನ್ನು ಸೃಷ್ಟಿಸುತ್ತಿದೆ. ಬಾಸ್ ಪರಮೇಶ್ವರ ಮೇಲೆ ಐಟಿ ದಾಳಿ ಆಗಿದ್ದಕ್ಕೆ ಆಪ್ತಸಹಾಯಕ ರಮೇಶ್ ಯಾಕೆ ಹೆದರಿಕೊಂಡ.? ಒಂದು ವೇಳೆ ಅಕ್ರಮ ನಡೆದಿದ್ದೆ ಆದಲ್ಲಿ, ಅದರಲ್ಲಿ ರಮೇಶ್ ಕೂಡ ಪಾಲ್ಗೊಂಡಿದ್ದನಾ? ರಮೇಶ್ ಏನಾದ್ರೂ ಬೇನಾಮಿಯಾಗಿ ಕೆಲಸ ಮಾಡಿದ್ದನಾ? ಈ ರೀತಿ ಪ್ರಶ್ನೆಗಳು ಉದ್ಭವ ಆಗಿವೆ. ಇದೇ ಕಾರಣಕ್ಕೆ ತನ್ನ ಬುಡಕ್ಕೆ ಬರುವ ಮೊದಲೇ ಹೆದರಿಕೊಂಡು ಆತ್ಮಹತ್ಯೆಗೆ ಶರಣಾದನಾ ಅನ್ನುವ ಚರ್ಚೆ ಈಗ ಆರಂಭವಾಗಿದೆ. ಇಲ್ಲಿ ಒಂದು ವಿಚಾರವನ್ನು ಮರೆಯುವಂತಿಲ್ಲ. ಈ ವ್ಯಕ್ತಿ.., ಅಂದ್ರೆ ಈ ರಮೇಶ್, ಕಳೆದ ಎಂಟು ವರ್ಷಗಳಿಂದ ಡಾಕ್ಟರ್ ಜಿ.ಪರಮೇಶ್ವರ್ ಅವರ ಅತ್ಯಂತ ನಂಬಿಕಸ್ಥ ಆಪ್ತ ಸಹಾಯಕನಾಗಿದ್ದ. ಪರಮೇಶ್ವರ ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಮಯದಿಂದ ಹಿಡಿದು, ಗೃಹ ಮಂತ್ರಿ ಆಗಿದ್ದ ಸಮಯದಲ್ಲಿ, ಹಾಗೂ ಡಿಸಿಎಂ ಆಗಿದ್ದ ಅವಧಿಯಲ್ಲೂ ಈತನೇ ಆಪ್ತ ಸಹಾಯಕನಾಗಿದ್ದ. ಈಗ ಹಲವು ರಹಸ್ಯ ಹಾಗೂ ನಿಗೂಢತೆಗಳನ್ನು ಸಮಾಧಿ ಮಾಡಿ ಈತ ಹೊರಟು ಹೋಗಿದ್ದಾನೆ. ಪೊಲೀಸರು ಈಗ ಈತನ ಸಾವಿನ ರಹಸ್ಯವನ್ನು ಬಯಲಿಗೆಳೆಯಬೇಕಿದೆ.

ಜೈಲಿಗೆ ಹೋಗ್ತಾರಾ ಡಾಕ್ಟರ್ ಜಿ ಪರಮೇಶ್ವರ್?

ಫ್ರೆಂಡ್ಸ್ ಈ ಪ್ರಶ್ನೆ ಕಾಡೋಕೂ ರಿಯಲ್ ಕಾರಣವಿದೆ. ಯಾಕಂದ್ರೆ ಈ ಕೇಸಲ್ಲಿ ಇಡಿ ಎಂಟರ್ ಆಗ್ತಾ ಇದೆ. ಸದ್ಯಕ್ಕೆ ಐಟಿ ದಾಳಿ ಮಾತ್ರ ಆಗಿದೆ. ಐಟಿ ಅಧಿಕಾರಿಗಳು ರೇಡ್ ಮಾಡಿ, ದಾಖಲೆ ಪರಿಶೀಲಿಸಿ, ದಂಡ ಹಾಕಲು ಅವಕಾಶವಿದೆ. ಆದರೆ ಕಾನೂನು ಪ್ರಕಾರ ಐಟಿ ಅಧಿಕಾರಿಗಳಿಗೆ ಬಂಧಿಸುವ ಅಧಿಕಾರ ಇಲ್ಲ. ಆದರೆ ಇಡಿಗೆ ಆ ಅಧಿಕಾರ ಇದೆ. ಈಗ ಪರಮೇಶ್ವರ್ ಗೆ ಭೀತಿ ಸೃಷ್ಟಿಸಿರುವುದು ಇದೇ ವಿಚಾರ. ಯಾಕಂದ್ರೆ, ಐಟಿ ತಾನು ದಾಳಿ ನಡೆಸಿದಾಗ ಸಿಕ್ಕಂತಹ ಕೋಟಿಗಟ್ಟಲೆ ದಾಖಲೆರಹಿತ ಹಣ ಮತ್ತು ಬೇನಾಮಿ ಆಸ್ತಿ ವಹಿವಾಟಿಗೆ ಸಂಬಂಧಪಟ್ಟಹಾಗೆ ಈಗಾಗಲೇ ಐಟಿಗೆ ಮಾಹಿತಿ ನೀಡಿದೆ ಅಂತ ಹೇಳಲಾಗುತ್ತಿದೆ. ಇದರ ಅರ್ಥ ಇಷ್ಟೇ. ಕೆಲವೇ ದಿನಗಳಲ್ಲಿ ಪರಮೇಶ್ವರ್ ಸುತ್ತ ಇಡಿ ಚಕ್ರವ್ಯೂಹ ಸುತ್ತಿಕೊಳ್ಳುವುದು ಗ್ಯಾರಂಟಿ. ಆಗ ಇಡಿ, ಡಾಕ್ಟರ್ ಜಿ ಪರಮೇಶ್ವರ್ ಅವರನ್ನು ಬಂಧಿಸುವ ಎಲ್ಲಾ ಸಾಧ್ಯತೆಗಳು ಇರುತ್ತವೆ. ಹೀಗಾಗಿ ಪರಮೇಶ್ವರ್​​​ಗೆ ಈಗ ಬಂಧನದ ಭೀತಿ ಎದುರಾಗಿದೆ.

ಬಿಜೆಪಿ ಐಟಿ-ಇಡಿ ಬಳಸಿ ಕಾಂಗ್ರೆಸ್ ನಾಯಕರನ್ನ ಟಾರ್ಗೆಟ್ ಮಾಡುತ್ತಿದೆಯಾ?

ಈ ಪ್ರಶ್ನೆಗೆ ಕಾಂಗ್ರೆಸ್ಸಿಗರನ್ನು ಕೇಳಿದರೆ ಹೌದು ಹೌದು ಅಂತ ಉತ್ತರ ಕೊಡುತ್ತಾರೆ… ಬಿಜೆಪಿಯವರನ್ನು ಕೇಳಿದರೆ ಇಲ್ಲ ಇಲ್ಲ ಅಂತ ಉತ್ತರ ಕೊಡುತ್ತಾರೆ. ಆದರೆ ಇದಕ್ಕೆ ನಿಜವಾದ ಉತ್ತರ ಹೌದು ಅಥವಾ ಇಲ್ಲ ಅನ್ನೋದರ ಮಧ್ಯ ಇದೆ ಅನಿಸುತ್ತೆ. ಯಾಕಂದ್ರೆ ಗಮನಿಸಿ ನೋಡಿ ಫ್ರೆಂಡ್ಸ್. ಇಲ್ಲಿ ಎರಡೂ ತರ ಇದೆ. ಪಾಯಿಂಟ್ ನಂಬರ್ ವನ್, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಹುತೇಕ ಕಾಂಗ್ರೆಸ್ ಮತ್ತು ಪ್ರತಿಪಕ್ಷ ನಾಯಕರ ಮೇಲೆನೆ ಐಟಿ, ಇಡಿ, ಸಿಬಿಐ ತನಿಖೆ ಜೋರಾಗಿದೆ. ದೇಶದಾದ್ಯಂತ ಬಿಜೆಪಿ ನಾಯಕರ ಮೇಲೆ ಯಾವ ಐಟಿ ದಾಳಿಯೂ ಆಗುತ್ತಿಲ್ಲ. ಬಿಜೆಪಿ ನಾಯಕರ ಮೇಲೆ ಯಾವ ದೊಡ್ಡ ತನಿಖೆಯೂ ಆಗುತ್ತಿಲ್ಲ. ಯಾವ ದೊಡ್ಡ ಬಿಜೆಪಿ ನಾಯಕರು ಜೈಲಿಗೂ ಹೋಗಿಲ್ಲ. ಬರೀ ಕಾಂಗ್ರೆಸ್ ಮತ್ತು ಪ್ರತಿಪಕ್ಷ ನಾಯಕರು ಮಾತ್ರ ಹಿಂಡುಹಿಂಡಾಗಿ ಜೈಲಿಗೆ ಹೋಗುತ್ತಿದ್ದಾರೆ. ಹೀಗಾಗಿ ಬಿಜೆಪಿ ಪ್ರತಿಪಕ್ಷಗಳನ್ನು ಟಾರ್ಗೆಟ್ ಮಾಡುತ್ತಿದೆ ಅನ್ನುವ ಆರೋಪಕ್ಕೆ ಸ್ವಲ್ಪ ಶಕ್ತಿ ಬಂದಂತಾಗುತ್ತದೆ. ಈ ಆರೋಪ ಬರಬಾರದು ಎಂದರೆ ಬಿಜೆಪಿಯಲ್ಲೂ ಇರುವ ಭ್ರಷ್ಟ ಕುಳಗಳ ಮೇಲೆ ಐಟಿ ದಾಳಿ ಆಗಬೇಕು. ಬೇರೆ ಬೇರೆ ರಾಜ್ಯಗಳ ಬಿಜೆಪಿ ನಾಯಕರ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಯಬೇಕು. ಆಗ ಮಾತ್ರ ಐಟಿ ಮತ್ತು ಇಡಿ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದೆ ಅಂತ ನಂಬಲು ಸಾಧ್ಯ. ಆದ್ರೆ, ಇಲ್ಲಿ ಇನ್ನೊಂದು ವಿಚಾರವನ್ನು ಮರೆಯುವಂತಿಲ್ಲ. ಯಾವುದೇ ಪಾರ್ಟಿ ಇರಲಿ ಯಾವುದೇ ರಾಜಕಾರಣಿ ಇರಲಿ ತಾನು ಪ್ರಾಮಾಣಿಕನಾಗಿದ್ದರೆ ಐಟಿ ಅಲ್ಲ ಸಿಬಿಐನೇ ಬಂದರೂ ಹೆದರುವ ಅವಶ್ಯಕತೆ ಇಲ್ಲ. ನೀವು ಸರಿಯಾಗಿ ಲೆಕ್ಕ ಕೊಟ್ಟರೆ ಐಟಿ, ಇಡಿ ಅಥವಾ ಸಿಬಿಐ ಏನೂ ಮಾಡಲು ಸಾಧ್ಯವಿಲ್ಲ.

 

Contact Us for Advertisement

Leave a Reply