ರಾವಣ ಎಂಬ ಗ್ರಾಮದಲ್ಲಿ ನಿತ್ಯ ರಾವಣನಿಗೆ ನಡೆಯುತ್ತೆ ಪೂಜೆ..!

ದಸರಾ ಹಬ್ಬದಲ್ಲಿ ಕೆಟ್ಟದ್ದರ ಪ್ರತೀಕವಾಗಿ ರಾವಣನ ಪ್ರತಿಕೃತಿ ದಹಿಸಲಾಗುತ್ತೆ. ಆದ್ರೆ ಮಧ್ಯಪ್ರದೇಶದ ವಿದಿಶಾ ನಗರದಲ್ಲಿ ರಾವಣ ಎಂದೇ ಒಂದು ಗ್ರಾಮವಿದ್ದು, ಇಲ್ಲಿ ರಾವಣನಿಗೆ ಪೂಜೆ-ಪುನಸ್ಕಾರಗಳು ನಡೆಯುತ್ತವೆ. ಹಲವಾರು ವರ್ಷಗಳಿಂದ ಈ ಪದ್ಧತಿ ನಡೆದು ಬಂದಿದ್ದು, ಗ್ರಾಮಸ್ಥರು ಇಂದಿಗೂ ಅದನ್ನು ಅನುಸರಿಸುತ್ತಾರೆ. ಈ ಗ್ರಾಮದಲ್ಲಿ ಮದುವೆ, ಮಕ್ಕಳ ಹುಟ್ಟುಹಬ್ಬ ಹೀಗೆ ಏನೇ ಶುಭಕಾರ್ಯಗಳಿದ್ದರೂ ಮೊದಲು ರಾವಣನಿಗೆ ಪೂಜೆ ಮಾಡ್ತಾರೆ. ಆಮೇಲೆ ಕೆಲಸ ಆರಂಭಿಸುತ್ತಾರೆ. ವಿಜಯದಶಮಿಯಂದು ಇಲ್ಲಿರೋ ರಾವಣ ಬಬ್ಬಾ ದೇವಸ್ಥಾನದಲ್ಲಿ ಪೂಜೆ ನೆರವೇರಿಸಲಾಗುತ್ತೆ. ಇಲ್ಲಿ ಯಾರೇ ಹೊಸ ವಾಹನ ಖರೀದಿಸಿ, ತಂದರೂ ಅದರಲ್ಲಿ ಜೈ ಲಂಕೇಶ್ ಎಂದು ಬರೆಸುತ್ತಾರೆ.

ಏನೇ ಹೊಸ ಕೆಲಸ ಮಾಡೋದಕ್ಕೂ ಮೊದಲು ರಾವಣನಿಗೆ ಪೂಜೆ ಸಲ್ಲಿಸದೇ ಇದ್ದರೆ ಏನಾದರೂ ಒಂದು ಅನಾಹುತ ಸಂಭವಿಸುತ್ತೆ ಅನ್ನೋದು ಇಲ್ಲಿನ ಜನರ ನಂಬಿಕೆ.

Contact Us for Advertisement

Leave a Reply