ಬಿಗ್​​ಬಾಸ್​​ ಮನೆಗೆ ವಾಪಸ್ ಬಂದ ರವಿ ಬೆಳಗೆರೆ..!

ಪತ್ರಕರ್ತ ರವಿ ಬೆಳಗೆರೆ ಬಿಗ್​ ಬಾಸ್ ಮನೆಗೆ ಬಂದು ಒಂದೇ ದಿನದಲ್ಲಿ ಹೊರಗೆ ಹೋಗಿದ್ದು ನಿಮಗೆಲ್ಲಾ ಗೊತ್ತೇ ಇದೆ. ಆದ್ರೆ ಇನ್ನೊಂದ್ ವಿಷ್ಯ ಅಂದ್ರೆ ಹೊರಹೋಗಿದ್ದ ರವಿ ಬೆಳಗೆರೆ ಸಂಜೆ ಮತ್ತೆ ಬಿಗ್​ಬಾಸ್​ ಮನೆಗೆ ವಾಪಸ್ ಆಗಿದ್ದಾರೆ. ಆದ್ರೂ ಅವರು ಮನೆಯಿಂದ ಹೊರಗೆ ಹೋಗಿದ್ದರಿಂದ ಸ್ಪರ್ಧಿಯಾಗಿ ಮುಂದುವರಿಯೋ ಅವಕಾಶವನ್ನು ಕಳೆದುಕೊಂಡಿದ್ದಾರೆ. ಈ ವಾರದ ಟಾಸ್ಕ್​​ಗಳಲ್ಲಿ ಅವರನ್ನು ಹೊರಗೆ ಇಡಲಾಗಿದ್ದು, ಶನಿವಾರದವರೆಗೆ ಬಿಗ್ ಬಾಸ್ ಮನೆಯಲ್ಲಿ ಇರಲು ಅವಕಾಶ ನೀಡಲಾಗಿದೆ. ನಂತರ ಅವರನ್ನು ಮನೆಯಿಂದ ಹೊರಗೆ ಕಳುಹಿಸಲಾಗುತ್ತೆ ಎನ್ನಲಾಗಿದೆ. ರವಿ ಬೆಳಗೆರೆ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಹೊರಬಂದಿದ್ದರು. ಆದ್ರೆ ಚಿಕಿತ್ಸೆ ಪಡೆದು ಪುನಃ ಬಿಗ್​​ಬಾಸ್ ಮನೆಯೊಳಗೆ ಹೋಗಿದ್ದಾರೆ. ಮತ್ತೆ ಯಾವಾಗ ಹೊರಗೆ ಬರ್ತಾರೋ ಗೊತ್ತಿಲ್ಲ ಎಂದು ಅವರ ಪುತ್ರಿ ಕೂಡ ಹೇಳಿದ್ದಾರೆ.  ರಕ್ತದೊತ್ತಡದಲ್ಲಿ ಸಮಸ್ಯೆ ಉಂಟಾಗಿ ರವಿ ಬೆಳೆಗೆರೆ ಅವರು ಕುಸಿದು ಬಿದ್ದಿದ್ದರಿಂದ, ವೈದ್ಯಕೀಯ ತಂಡ ತುರ್ತು ಚಿಕಿತ್ಸೆ ನೀಡಿತ್ತು. ನಂತರ ಇದೇ ಕಾರಣಕ್ಕೆ ಬಿಗ್‌ಬಾಸ್‌ ಮನೆಯಿಂದ ಹೊರ ಬಂದಿದ್ದ ರವಿ ಬೆಳೆಗೆರೆ, ಹತ್ತಿರದ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದರು. ಅಲ್ಲದೆ ರಾಜರಾಜೇಶ್ವರಿ ನಗರದಲ್ಲಿ ಕುಟುಂಬ ವೈದ್ಯರ ಬಳಿ ಆರೋಗ್ಯ ತಪಾಸಣೆ ಕೂಡ ಮಾಡಿಸಿದ್ದರು ಎನ್ನಲಾಗಿದೆ.

 

Contact Us for Advertisement

Leave a Reply