ಒಂದೇ ದಿನಕ್ಕೆ ಬಿಗ್ ಬಾಸ್ ಮನೆಯಿಂದ ಹೊರಬಂದ ರವಿ ಬೆಳಗೆರೆ..! ಕಾರಣವೇನು..?

ನಿನ್ನೆಯಷ್ಟೇ ಬಿಗ್​ ಬಾಸ್ ಶುರುವಾಗಿದೆ. ಆದ್ರೆ 3ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಪತ್ರಕರ್ತ ರವಿ ಬೆಳಗೆರೆ ಒಂದೇ ದಿನಕ್ಕೆ ಬಿಗ್ ಬಾಸ್ ಮನೆಯಿಂದ ಹೊರನಡೆದಿದ್ದಾರೆ. ರವಿ ಬೆಳಗೆರೆಗೆ ಆರೋಗ್ಯದ ಸಮಸ್ಯೆ ಕಾಡುತ್ತಿದ್ದು, ನಡೆದಾಡಲು ಕಷ್ಟವಾಗುತ್ತಿದೆ. ಇದೇ ಕಾರಣಕ್ಕೆ ಅವರು ಎಂಟ್ರಿ ಕೊಡುವಾಗಲೇ ನಡೆಯಲಾಗದೇ ಸಹಸ್ಪರ್ಧಿ ಕುರಿ ಪ್ರತಾಪ್ ಸಹಾಯ ಪಡೆದಿದ್ದರು. ಅಲ್ಲದೆ ಮನೆ ಒಳಗೆ ಹೋಗುತ್ತಿದ್ದಂತೆ ನನಗೆ ಸಿಗರೇಟ್ ಸೇದದೆ ಇರಲು ಆಗಲ್ಲ. ಬಿಗ್ ಬಾಸ್​ ನನಗೆ ಸಿಗರೇಟ್ ಕೊಡಿ ಎಂದು ಮನವಿ ಮಾಡಿದ್ದರು. ಇಂದು ಪುನಃ ಅವರ ಬಿಪಿ ಲೋ ಆಗಿದ್ದು, ಚಿಕಿತ್ಸೆಯ ಅನಿವಾರ್ಯತೆಯಿಂದ ಬಿಗ್ ಬಾಸ್ ಅನುಮತಿ ಪಡೆದು ಮನೆಯಿಂದ ಹೊರನಡೆದಿದ್ದಾರೆ ಎನ್ನಲಾಗಿದೆ. ಅದ್ರ ಜೊತೆಗೆ ಅವರು ಮತ್ತೆ ಬಿಗ್ ಬಾಸ್ ಮನೆಗೆ ಬರ್ತಾರಾ ಅನ್ನೋ ಚರ್ಚೆಗಳು ಶುರುವಾಗಿದೆ. ಆದ್ರೆ ಅದಕ್ಕೆ ಸಮಯವೇ ಉತ್ತರಿಸಬೇಕಿದೆ.

Contact Us for Advertisement

Leave a Reply