ಪತ್ನಿಪರ ಚುನಾವಣೆ ಪ್ರಚಾರ ಮಾಡಿದ ಕ್ರಿಕೆಟರ್‌ ರವೀಂದ್ರ ಜಡೇಜ ನಡೆಗೆ ವಿರೋಧ!

masthmagaa.com:

ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರೋ ಪತ್ನಿ ಪರ ಪ್ರಚಾರ ಮಾಡಿ ಕ್ರಿಕೆಟಿಗ ರವೀಂದ್ರ ಜಡೇಜ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಟೀಮ್‌ ಇಂಡಿಯಾವನ್ನ ಪ್ರತಿನಿಧಿಸುವ ಆಟಗಾರ ಭಾರತದ ಜೆರ್ಸಿ ಧರಿಸಿ ರಾಜಕೀಯ ಪಕ್ಷಗಳ ಪರ ಪ್ರಚಾರ ಮಾಡೋದು BCCI ಒಪ್ಪಂದದ ಉಲ್ಲಂಘನೆಯಲ್ವಾ? ಅಂತ ಎಐಎಂಐಎಂ ವಕ್ತಾರ ವಾರಿಸ್‌ ಪಠಾಣ್‌ ಪ್ರಶ್ನಿಸಿ ಟ್ವೀಟ್‌ ಮಾಡಿದ್ದಾರೆ. ಹಾಗೂ ಜಡೇಜ ಅವ್ರ ಪತ್ನಿ ಟ್ವೀಟ್‌ ಮಾಡಿರೋ ಪೋಸ್ಟರ್‌ನಲ್ಲಿ ಟೀಮ್‌ ಇಂಡಿಯಾ ಜೆರ್ಸಿ ಧರಿಸಿರುವ ಜಡೇಜ ಅವ್ರ ಫೋಟೊವನ್ನ ಅಟ್ಯಾಚ್‌ ಮಾಡಲಾಗಿದೆ. ಟೀಕೆಗಳು ಕೇಳಿ ಬಂದ ನಂತ್ರ ಪೋಸ್ಟ್‌ನ್ನು ಡಿಲೀಟ್‌ ಮಾಡಲಾಗಿದೆ. ಅಂದ್ಹಾಗೆ ಗಾಯದಿಂದ ಟೀಮ್‌ ಇಂಡಿಯಾದಿಂದ ದೂರ ಇರೋ ಜಡೇಜ, ಪತ್ನಿ ಪರ ಪ್ರಚಾರ ನಡೆಸುತ್ತಿರೋ ಬಗ್ಗೆಯೂ ಆಕ್ರೋಶ ಕೇಳಿ ಬಂದಿದೆ. ಚುನಾವಣಾ ಪ್ರಚಾರ ನಡೆಸೋಕೆ ಜಡೇಜ ಫಿಟ್‌ ಆಗಿದ್ದು, ಟೀಮ್‌ನಲ್ಲಿ ಆಡೋಕೆ ಅನ್‌ಫಿಟ್‌ ಅಂತ ಆರೋಪಿಸಲಾಗಿದೆ.

-masthmagaa.com

Contact Us for Advertisement

Leave a Reply