ಟೆಸ್ಟ್‌ ಕ್ರಿಕೆಟ್‌ನಲ್ಲಿ 250 ವಿಕೆಟ್‌ ಪಡೆದು ದಾಖಲೆ ಬರೆದ ರವೀಂದ್ರ ಜಡೇಜಾ!

masthmagaa.com:

5 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿರೊ ರವೀಂದ್ರ ಜಡೇಜಾ ಆಸ್ಟ್ರೇಲಿಯಾ ವಿರುದ್ದ ಎರಡನೇ ಟೆಸ್ಟ್‌ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ. ಪಂದ್ಯದ 2ನೇ ಸೆಷನ್‌ನಲ್ಲಿ 81 ರನ್‌ಗಳಿಸಿದ್ದ ಆಸ್ಟ್ರೇಲಿಯಾದ ಆರಂಭಿಕ ಉಸ್ಮಾನ್‌ ಖವಾಜಾ ಅವರ ವಿಕೆಟ್‌ ಪಡೆದು, ಟೆಸ್ಟ್ ಕ್ರಿಕೆಟ್‌ನಲ್ಲಿ 250 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಈ ಮೂಲಕ ಕಪಿಲ್‌ ದೇವ್‌ ಹಾಗೂ ಪಾಕ್‌ನ ಇಮ್ರಾನ್‌ ಖಾನ್‌ ಅವ್ರ ದಾಖಲೆಯನ್ನ ಜಡೇಜ ಸರಿಗಟ್ಟಿದ್ದಾರೆ. ಅಲ್ದೇ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ 2500 ರನ್‌ ಹಾಗೂ 250 ವಿಕೆಟ್‌ಗಳನ್ನ ಗಳಿಸಿದ ಏಷ್ಯಾದ ಅತ್ಯಂತ ವೇಗದ ಆಟಗಾರ ಅನ್ನೊ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಜಡೇಜಾ 62 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ರೆ, ಇಮ್ರಾನ್ ಖಾನ್ 64 ಮತ್ತು ಕಪಿಲ್ ದೇವ್ 65 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ರು.

-masthmagaa.com

Contact Us for Advertisement

Leave a Reply