ವಿಶ್ವದ ಅತ್ಯಂತ ಕಷ್ಟಕರವಾದ ಸೈಕ್ಲಿಂಗ್‌ ಚಾಲೆಂಜ್‌ಅನ್ನ ಪೂರ್ಣಗೊಳಿಸಿದ ಭಾರತದ 55 ಜನ

masthmagaa.com:

ಭಾರತದ 55 ಸೈಕ್ಲಿಸ್ಟ್‌ಗಳು ವಿಶ್ವದ ಅತ್ಯಂತ ಕಷ್ಟಕರವಾದ ಸೈಕ್ಲಿಂಗ್‌ ಚಾಲೆಂಜ್‌ ಒಂದನ್ನ ಪೂರ್ಣಗೊಳಿಸಿ ದಾಖಲೆ ಬರೆದಿದ್ದಾರೆ. ಬ್ರಿಟನ್‌ನ ಹಲವು ಭಾಗಗಳಲ್ಲಿ ಬಿಸಿ ಹೆಚ್ಚಾಗಿ ಬರಗಾಲ ಎದುರಾಗಿದೆ. ಈ ಸಂದರ್ಭದಲ್ಲಿ ಲಂಡನ್‌ – ಎಡಿನ್‌ ಬರ್ಗ್-‌ ಲಂಡನ್‌ 2022 ಅಥವಾ ಎಲ್‌ಇಎಲ್ 2022 ಚಾಲೆಂಜನ್‌ಅನ್ನ ಭಾರತೀಯರು ಎದುರಿಸಿದ್ದಾರೆ. ಈ ಚಾಲೆಂಜಲ್ಲಿ ಜೈಪುರದ 50 ವರ್ಷದ ರೇಣು ಸಿಂಘಿ ಅನ್ನೋರು 128 ಗಂಟೆ 20 ನಿಮಿಷಗಳಲ್ಲಿ ನಿಗದಿತ ಗುರಿಯನ್ನ ತಲುಪೋದ್ರ ಮೂಲಕ ಈ ಸವಾಲನ್ನ ಪೂರ್ಣಗೊಳಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಹಾಗೆ ಚೆನ್ನೈನ 40 ವರ್ಷದ ಅರುಣ್‌ ಕುಮಾರಸ್ವಾಮಿ ಈ ಸವಾಲನ್ನ 102 ಗಂಟೆ, 25 ನಿಮಿಷಗಳಲ್ಲಿ ಪೂರ್ಣಗೊಳಿಸಿದ ಮೊದಲ ಭಾರತೀಯರಾಗಿದ್ದಾರೆ. ಇನ್ನು ಈ ಸವಾಲಲ್ಲಿ ತಮಿಳು ನಟ ಆರ್ಯ ಸೇರಿದಂತೆ ಒಟ್ಟು 117 ಜನ ಭಾರತೀಯರು ಭಾಗವಹಿಸುವ ಮೂಲಕ, ಈ ಸವಾಲಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ ಮೂರನೇ ದೇಶ ಭಾರತವಾಗಿದೆ.

-masthmagaa.com

Contact Us for Advertisement

Leave a Reply