ಸ್ಪೀಕರ್ ಗೆ ರಾಷ್ಟ್ರಪತಿ ಎಂದ ರೇಣುಕಾಚಾರ್ಯ..!

ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಲು ಹೋಗಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಎಡವಟ್ಟು ಮಾಡಿಕೊಂಡಿದ್ದಾರೆ. ಸ್ಪೀಕರ್ ಅನ್ನೋ ಬದಲು ರಾಷ್ಟ್ರಪತಿ ಅಂದುಬಿಟ್ಟಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗ್ತಿಲ್ಲ ಅಂತ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಕೆಲ ಶಾಸಕರು ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯನ್ನು ಸುಪ್ರೀಂಕೋರ್ಟ್ ಕೂಡ ಎತ್ತಿಹಿಡಿದಿದೆ. ಆದ್ರೆ ರಾಷ್ಟ್ರಪತಿ ರಮೇಶ್ ಕುಮಾರ್ ಕಾಂಗ್ರೆಸ್ ಏಜೆಂಟರಂತೆ ವರ್ತಿಸಿ, ತುಘಲಕ್ ದರ್ಬಾರ್ ನಡೆಸಿ ಶಾಸಕರನ್ನು ಅನರ್ಹಗೊಳಿಸಿದ್ರು ಅಂತ ಹೇಳಿದ್ದಾರೆ. ಆದ್ರೆ ರಾಜೀನಾಮೆ ಕೊಟ್ಟ ಶಾಸಕರ ಬಗ್ಗೆ ನನಗೆ ಗೌರವ ಇದ್ದು, ನಾನು ಮಾತ್ರ ಯಾವುದೇ ಕಾರಣಕ್ಕೂ ಅವರನ್ನು ಅನರ್ಹ ಶಾಸಕರು ಎಂದು ಕರೆಯೋದಿಲ್ಲ ಎಂದರು. ಜೊತೆಗೆ ಉಪಚುನಾವಣೆಯಲ್ಲಿ ಬಿಜೆಪಿ ಎಲ್ಲಾ ಕ್ಷೇತ್ರಗಳಲ್ಲಿ ಗೆಲುವು ದಾಖಲಿಸುತ್ತೆ ಅಂತ ಹೇಳಿದ್ರು.

Contact Us for Advertisement

Leave a Reply