ದೇಶದಲ್ಲಿ ಇವತ್ತಿನ ಗಣಹಬ್ಬ ಹೇಗಿತ್ತು? ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ

masthmagaa.com:

ದೆಹಲಿ: ದೇಶದಲ್ಲಿಂದು 73ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯ್ತು. 21 ಗನ್​ ಸಲ್ಯೂಟ್ ಮೂಲಕ ರಾಜ್​​ಪಥ್​​ನಲ್ಲಿ ಧ್ವಜಾರೋಹಣ ನೆರವೇರಿಸಲಾಯ್ತು. ಬಳಿಕ ಹತ್ತೂವರೆ ಗಂಟೆಗೆ ಲೆಫ್ಟಿನೆಂಟ್ ಜನರಲ್ ವಿಜಯ್ ಕುಮಾರ್ ಮಿಶ್ರಾ ನೇತೃತ್ವದಲ್ಲಿ ಪರೇಡ್ ಶುರು ಮಾಡಲಾಯ್ತು. ವಿಸಿಬಿಲಿಟಿ ಕಾರಣದಿಂದಾಗಿ ಪ್ರತಿವರ್ಷಕ್ಕಿಂತ ಅರ್ಧ ಗಂಟೆ ತಡವಾಗಿ ಕಾರ್ಯಕ್ರಮ ಶುರು ಮಾಡಲಾಯ್ತು. ಇದಕ್ಕೂ ಮುನ್ನ ಪ್ರಧಾನಿ ಮೋದಿ ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ಹೋಗಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ್ರು.
– ಕಾಶ್ಮೀರದಲ್ಲಿ ಉಗ್ರರೊಂದಿಗೆ ಹೋರಾಡುವಾಗ ಹುತಾತ್ಮರಾದ ಅಸಿಸ್ಟೆಂಟ್ ಸಬ್​ ಇನ್​ಸ್ಪೆಕ್ಟರ್​​ ಬಾಬು ರಾಮ್​​ಗೆ ಭಾರತದ ಅತ್ಯಂತ ಹೈಯೆಸ್ಟ್​ ಗ್ಯಾಲಂಟರಿ ಅವಾರ್ಡ್ ಆಗಿರೋ ಅಶೋಕ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಬಾಬು ರಾಮ್ ಅವರ ಪತ್ನಿ ಈ ಪ್ರಶಸ್ತಿ ಸ್ವೀಕರಿಸಿದ್ರು.
– ದೇಶದ ವಿವಿಧತೆಯಲ್ಲಿ ಏಕತೆ, ಸಂಸ್ಕೃತಿಯಲ್ಲಿನ ವೈವಿಧ್ಯತೆಯನ್ನು ಪ್ರದರ್ಶಿಸುವ ಟ್ಯಾಬ್ಲೋಗಳ ಪ್ರದರ್ಶನ ನಡೀತು. ಕರ್ನಾಟಕ ಟ್ಯಾಬ್ಲೋ ಸೇರಿ ವಿವಿಧ ರಾಜ್ಯಗಳ, ಸರ್ಕಾರಿ ಇಲಾಖೆಗಳ ಟ್ಯಾಬ್ಲೋಗಳು ಗಮನ ಸೆಳೆದ್ವು. ಸೆಂಟ್ರಲ್ ಪಬ್ಲಿಕ್ ವರ್ಕ್ಸ್​ ಡಿಪಾರ್ಟ್​​ಮೆಂಟ್​ ಸುಭಾಶ್ ಚಂದ್ರ ಬೋಸ್ ಅವರ 125ನೇ ಜಯಂತಿಯ ಅಂಗವಾಗಿ ಟ್ಯಾಬ್ಲೋ ಮೂಲಕ ಶದ್ಧಾಂಜಲಿ ಅರ್ಪಿಸ್ತು.
– ಪ್ರಧಾನಿ ಮೋದಿ ಇವತ್ತಿನ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ರು. ಉತ್ತರಾಖಂಡ್​​​​ನ ಸಂಸ್ಕೃತಿ ಬಿಂಬಿಸೋ ಟೋಪಿ ಧರಿಸಿದ್ರು. ಅದ್ರಲ್ಲಿ ಉತ್ತರಾಖಂಡ್​​ನ ರಾಜ್ಯಪುಷ್ಪವಾದ ಬ್ರಹ್ಮಕಮಲ ಹೂವಿನ ರಚನೆಯಿತ್ತು. ಜೊತೆಗೆ ಮಣಿಪುರದ ಶಾಲು ಲೇರಿಮ್ ಫಿ ಧರಿಸಿದ್ರು. ಅಂದಹಾಗೆ ಸದ್ಯದಲ್ಲೇ ಉತ್ತರಾಖಂಡ್ ಮತ್ತು ಮಣಿಪುರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇನ್ನು ಕಳೆದ ವರ್ಷ ಕೂಡ ಗುಜರಾತ್​ನ ಜಮ್​ನಗರದ ರಾಯಲ್ ಫ್ಯಾಮಿಲಿ ಕಡೆಯಿಂದ ಗಿಫ್ಟ್ ಕೊಟ್ಟಿದ್ದ ಪೇಟವೊಂದನ್ನು ಧರಿಸಿದ್ರು.
– ಈ ಬಾರಿಯ ವಾಯುಪಡೆಯ ಟ್ಯಾಬ್ಲೋದಲ್ಲಿ ರಫೇಲ್ ಫೈಟರ್​​ಜೆಟ್​​ ಪೈಲಟ್ ಶಿವಾಂಗಿ ಸಿಂಗ್ ಭಾಗಿಯಾಗಿಯಾಗಿದ್ದಾರೆ. ಹೀಗೆ ಪರೇಡ್​ನಲ್ಲಿ ಭಾಗಿಯಾದ 2ನೇ ಮಹಿಳಾ ಪೈಲಟ್​​ ಇವರಾಗಿದ್ದಾರೆ. ಕಳೆದ ವರ್ಷ ಲೆಫ್ಟಿನೆಂಟ್ ಭಾವ್ನಾ ಕಾಂತ್ ಪರೇಡ್​​ನಲ್ಲಿ ಭಾಗಿಯಾದ ಮೊದಲ ಮಹಿಳಾ ಪೈಲಟ್ ಎನಿಸಿಕೊಂಡಿದ್ರು.
– ಇವತ್ತಿನ ರಿಪಬ್ಲಿಕ್ ಡೇ ಪರೇಡ್​​ನಲ್ಲಿ 1971ರ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಸ್ತ್ರಾಸ್ತ್ರಗಳನ್ನ ಪ್ರದರ್ಶಿಸಲಾಯ್ತು.
– ಗಣಹಬ್ಬದ ಅಂಗವಾಗಿ ಇವತ್ತು ಬಿಎಸ್​ಎಫ್ ಯೋಧರು ಮತ್ತು ಪಾಕಿಸ್ತಾನದ ಸೈನಿಕರು ಪಂಜಾಬ್​​ನ ಅಟ್ಟಾರಿ-ವಾಘಾ, ರಾಜಸ್ತಾನದ ಜೈಸಲ್ಮೇರ್​​ ಗಡಿಯಲ್ಲಿ ಸಿಹಿ ಹಂಚಿಕೊಂಡಿದ್ದಾರೆ.
– ಗಣಹಬ್ಬದ ಅಂಗವಾಗಿ ಇಂಡೋ- ಟಿಬೇಟಿಯನ್ ಬಾರ್ಡರ್ ಪೊಲೀಸರು ಮೈನಸ್ 40 ಡಿಗ್ರಿ ತಾಪಮಾನ ಇರೋ ಲಡಾಖ್ ಗಡಿಯಲ್ಲಿ 15 ಸಾವಿರ ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ.

ಸ್ವಾತಂತ್ರ್ಯ ಬಂದು 75 ವರ್ಷ ಭರ್ತಿಯಾದ ಹಿನ್ನೆಲೆ ಇವತ್ತಿನ ಗಣರಾಜ್ಯೋತ್ಸವ ಕೆಲವೊಂದು ವಿಶೇಷತೆಗಳಿಂದ ಕೂಡಿತ್ತು. ದೇಶದಲ್ಲಿ ಇದೇ ಮೊದಲ ಬಾರಿಗೆ 75 ಯುದ್ಧ ವಿಮಾನಗಳನ್ನೊಳಗೊಂಡ ಬೃಹತ್ ಏರ್ ಶೋ ಅಥವಾ ಫ್ಲೈಪಾಸ್ಟ್ ನಡೆದಿದೆ. ಇದರ ದೃಶ್ಯವನ್ನು ಲೈವ್ ಆಗಿ ಬ್ರಾಡ್ ಕಾಸ್ಟ್ ಮಾಡಲಾಗಿದೆ. ಲೋಹದ ಹಕ್ಕಿಗಳು ಬಾನಂಗಳಲ್ಲಿ ವಿವಿಧ ಭಂಗಿಗಳಲ್ಲಿ ಹಾರ್ತಿರೋದು, ಮೋಡಗಳ ಮೇಲೆ ಹಾರುತ್ತಿರೋ ದೃಶ್ಯಗಳನ್ನು ಪ್ರಸಾರ ಮಾಡಲಾಯ್ತು. ಪರೇಡ್ ಕಾರ್ಯಕ್ರಮ ನಡೀತಿದ್ದ ಜಾಗದಲ್ಲಿದ್ದ ದೊಡ್ಡ ಪರದೆಯ ಮೇಲೆ ಈ ದೃಶ್ಯಗಳನ್ನು ತೋರಿಸಲಾಗಿದೆ. ಹೊಸದಾಗಿ ಭಾರತದ ವಾಯುಪಡೆ ಸೇರಿರೋ 5 ರಫೇಲ್ ವಿಮಾನಗಳು ಕೂಡ ಈ ಏರ್ ಶೋನಲ್ಲಿ ಭಾಗಿಯಾಗಿವೆ.

ರಾಷ್ಟ್ರಪತಿಯ ಬಾಡಿಗಾರ್ಡ್​ ತಂಡದಲ್ಲಿದ್ದ ವಿರಾಟ್ ಅನ್ನೋ ಕುದುರೆ ಇವತ್ತು ನಿವೃತ್ತಿಯಾಗಿದೆ. ಬಾಡಿಗಾರ್ಡ್​ ಕಮಾಂಡಂಟ್ ಕರ್ನಲ್ ಅನುಪ್ ತಿವಾರಿ ನೇತೃತ್ವದ ತಂಡದಲ್ಲಿದ್ದ ಈ ಕುದುರೆ 13 ಗಣರಾಜ್ಯೋತ್ಸವಗಳಿಂದ ಸೇವೆ ಸಲ್ಲಿಸಿತ್ತು. ಇದೀಗ ವಯಸ್ಸಾಗಿದ್ದು, ಇವತ್ತು ಅದಕ್ಕೆ ಕೊನೆಯ ಗಣರಾಜ್ಯವಾಗಿದೆ. ಹೀಗಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾತ್ ಸಿಂಗ್​​ ಈ ಕುದುರೆ ಬಳಿ ಬಂದು ತಲೆ ಸವರಿ ಗೌರವಯುತ ಮತ್ತು ಪ್ರೀತಿಯ ವಿದಾಯ ಹೇಳಿದ್ರು. ಜನವರಿ 15ರಂದು ಆರ್ಮಿ ಡೇ ದಿನ ವಿರಾಟ್​​ಗೆ ಚೀಫ್ ಆಫ್ ದಿ ಆರ್ಮಿ ಸ್ಟಾಫ್ ಅಂತ ಗೌರವಿಸಲಾಗಿತ್ತು. ಇದಕ್ಕೆ ಚಾರ್ಜರ್ ಅನ್ನೋ ನಿಕ್ನೇಮ್ ಕೂಡ ಇತ್ತು.

ಇವತ್ತಿನ ಗಣಹಬ್ಬದಲ್ಲಿ ಕಟ್ಟುನಿಟ್ಟಾಗಿ ಕೊರೋನಾ ಕ್ರಮಗಳನ್ನು ಪಾಲಿಸಲಾಗಿತ್ತು. ಕಾರ್ಯಕ್ರಮದಲ್ಲಿ 5 ಸಾವಿರ ಜನ ಭಾಗಿಯಾಗಿದ್ರು. ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡ ವಯಸ್ಕರು ಮತ್ತು ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡ 15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿತ್ತು. ಇನ್ನು ಈ ಸಲ ರಾಷ್ಟ್ರಪತಿ ಭವನದಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸಿರಲಿಲ್ಲ.

ಗಣರಾಜ್ಯೋತ್ಸವದ ಶುಭಾಶಯ ಕೋರಿ ಕ್ರಿಸ್‌ ಗೇಲ್‌ ಮತ್ತು ಜಾಂಟಿ ರೋಡ್ಸ್‌ಗೆ ಪ್ರಧಾನಿ ಮೋದಿ ಪತ್ರ ಬರೆದಿದ್ದಾರೆ. ನೀವಿಬ್ಬರು ಭಾರತದ ಗಟ್ಟಿ ಸಂಬಂಧವನ್ನು ಸಾರುವ ವಿಶೇಷ ರಾಯಭಾರಿಗಳು ಎಂದು ಪತ್ರದಲ್ಲಿ ಮೋದಿ ಉಲ್ಲೇಖ ಮಾಡಿದ್ದಾರೆ. ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ಜಾಂಟಿ ರೋಡ್ಸ್‌ “ನಿಮ್ಮ ಪ್ರೀತಿಯ ಮಾತುಗಳಿಗೆ ಧನ್ಯವಾದಗಳು ಮೋದಿಜಿ” ಎಂದರೆ, ಗೇಲ್‌ “ಭಾರತದೊಂದಿಗಿನ ನನ್ನ ಹತ್ತಿರದ ಬಾಂಧವ್ಯವನ್ನು ಇದು ಮತ್ತೆ ದೃಢಪಡಿಸುತ್ತದೆ” ಎಂದು ಟ್ವೀಟ್‌ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಫೀಲ್ಡಿಂಗ್‌ ಕೋಚ್‌ ಆಗಿದ್ದ ಬಹುಕಾಲ ಭಾರತದಲ್ಲೇ ವಾಸವಾಗಿದ್ದ ಜಾಂಟಿ ರೋಡ್ಸ್‌ ತನ್ನ ಮಗಳಿಗೆ ಇಂಡಿಯಾ ಅಂತಲೇ ಹೆಸರಿಟ್ಟಿದ್ದರು. ಅದೇ ರೀತಿ ಕ್ರಿಸ್‌ ಗೇಲ್‌ ಕೂಡ ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದು ಹಲವು ಬಾರಿ ಭಾರತವನ್ನು ತನ್ನ ಎರಡನೇ ತವರು ಎಂದು ಹೇಳಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply